ಕೊರೊನಾ ಹೊಸ ತಳಿ ಪತ್ತೆಯಿಂದ ಪೋಷಕರು ಪುಲ್ ಟೆನ್ಷನ್

ಮಂಗಳವಾರ, 30 ನವೆಂಬರ್ 2021 (20:37 IST)
ಮಹಾಮಾರಿ ಕೊರೊನಾ 3ನೇ ಅಲೆ ಜೊತೆಗೆ ಒಮಿಕ್ರೋನ್ ಜನರನ್ನು ಆತಂಕದಲ್ಲಿ ಮುಳುಗುವಂತೆ ಮಾಡಿದೆ. ಅದರಲ್ಲೂ ಇತ್ತೀಚೆಗೆ ವಿದ್ಯಾರ್ಥಿಗಳಲ್ಲಿ ಹೆಚ್ಚಾಗಿ ಕೊರೊನಾ ಪತ್ತೆಯಾಗುತ್ತಿರುವುದು ದುಪ್ಪಟ್ಟು ಆತಂಕ ಹೆಚ್ಚಿಸಿದೆ. ಕೊರೊನಾ ಹೊಸ ತಳಿ ಪತ್ತೆಯಿಂದ ಪೋಷಕರು ಪುಲ್ ಟೆನ್ಷನ್ ಆಗಿದ್ದಾರೆ.
 
ಇತ್ತೀಚೆಗೆ ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿರುವುದರಿಂದ ಪೋಷಕರಲ್ಲಿ ಹೆಚ್ಚಿದ ಆತಂಕ ಉಂಟಾಗಿದೆ. ರಾಜ್ಯದ ಎಲ್ಲಾ ಕಡೆ ಅಂಗನವಾಡಿಯಿಂದ ಕಾಲೇಜ್ ವರೆಗೂ ಶಾಲಾ ಕಾಲೇಜು ಆರಂಭವಾಗಿದೆ. ಮಕ್ಕಳು ಕಳೆದ ಎರಡು ತಿಂಗಳಿನಿಂದ ಶಾಲೆಗೆ ಹೋಗುತ್ತಾ ಇದ್ದಾರೆ. ಆದ್ರೆ ಈಗ ಮತ್ತೆ ಹೊಸ ತಳಿ ಪತ್ತೆಯಿಂದ ಪೋಷಕರು ಶಾಲೆಗೆ ಮಕ್ಕಳನ್ನ ಕಳಿಸಲು ಹಿಂದೇಟು ಹಾಕುತ್ತಿದ್ದಾರೆ. ಮಕ್ಕಳಿಗೆ ವ್ಯಾಕ್ಸಿನ್ ಆಗಿಲ್ಲ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಪೋಷಕರ ಆತಂಕ ಏನು?
ಮಕ್ಕಳಿಗೇ ಮೂರನೇ ಅಲೆ ಬರುತ್ತೆ ಅನ್ನೊ ಭಯದಲ್ಲಿ ಸದ್ಯ ಪೋಷಕರು ದಿನ ಕಳೆಯುತ್ತಿದ್ದಾರೆ. ಅಲ್ಲದೆ ಮಕ್ಕಳಿಗೆ ಇನ್ನು ವ್ಯಾಕ್ಸಿನ್ ಲಭ್ಯವಾಗಿಲ್ಲ, ಇದರಿಂದ ಮಕ್ಕಳು ಅಪಾಯದಲ್ಲಿದ್ದಾರೆ. ಸದ್ಯದ ವಾತಾವರಣದಿಂದ ಮಕ್ಕಳಲ್ಲಿ ವೈರಲ್ ಜ್ವರ, ನೆಗಡಿ, ಕೆಮ್ಮು ಕಿರಿಕಿರಿ ಇದೆ. ಮಕ್ಕಳಿಂದ ಮನೆ ಮನೆಗೂ ಕೊರೊನಾ ಹರಡುವ ಆತಂಕ ಇದೆ. ಅಲ್ಲದೆ ಮಕ್ಕಳಿಗೆ ಕೊರೊನಾ ಮಾರ್ಗಸೂಚಿ ಪಾಲನೆ ಕಷ್ಟ. ಶಾಲೆಯಲ್ಲಿ ಒಂದು ಮಗುವಿಗೆ ಕೊರೊನಾ ಬಂದ್ರು ಕಂಪ್ಲೀಟ್ ಶಾಲೆ ಮಕ್ಕಳಿಗೆ ಹರಡುವ ಭಯ ಇದೆ. ಮಕ್ಕಳಿಲ್ಲಿ ಸದ್ಯ ವೈರಲ್ ಇನ್ಫೆಕ್ಷನ್, ಡೆಂಘೀ ಜ್ವರ ಕಾಣಿಸಿಕೊಳ್ಳುತ್ತಿದೆ. ಮಕ್ಕಳು ಶಾಲೆಯಲ್ಲಿ ಮಾಸ್ಕ್ ಸರಿಯಾಗಿ ಹಾಕಲ್ಲ, ಸಾಮಾಜಿಕ ಅಂತರ ಕಷ್ಟ ಎಂಬುವುದು ಪೋಷಕರನ್ನು ಕಾಡುತ್ತಿರುವ ಭಯ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ