‘ಹೋಗ್ಬಿಟ್ಯಲ್ಲೇ ಯವ್ವಾ…’ ಬದುಕಿ ಬಾರದ ಕಾವೇರಿಗಾಗಿ ಹೆತ್ತವರ ರೋಧನ
ಕೊನೆಗೂ ಮಧ್ಯರಾತ್ರಿ 11.34 ರ ಸುಮಾರಿಗೆ ಕಾವೇರಿಯನ್ನು ಹೊರಗೆ ಕರೆತರಲು ಸಿಬ್ಬಂದಿ ಯಶಸ್ವಿಯಾದರು. ಆದರೆ ಕೊಳವೆ ಬಾವಿಯಿಂದ ಹೊರ ಬಂದಿದ್ದು, ಆಕೆಯ ಮೃತದೇಹವಾಗಿತ್ತು. ತಂದೆ ಹಾಗೂ ಕುಟುಂಬಸ್ಥರು ‘ನಗ್ತಾ ನಗ್ತಾ ನಮ್ಮ ಕಣ್ಣೆದುರು ಆಡ್ಕೊಂಡಿದ್ಯಲ್ಲೇ.. ಹೋಗ್ಬಿಟ್ಯಲ್ಲೇ..’ ಎಂದು ಅಳುತ್ತಿದ್ದರೆ ನೆರೆದಿದ್ದವರ ಕಣ್ಣು ಹನಿಗೂಡಿದವು. ಅತ್ತ ಕಾವೇರಿಯನ್ನು ಬದುಕಿಸಲಾಗಲಿಲ್ಲ ಎಂದು ಸಿಬ್ಬಂದಿಗಳೂ ಬೇಸರಿಸಿಕೊಂಡರು.