ಕೆ ಕವಿತಾ ಅಮಾನತು: ಇದೊಂದು ದೊಡ್ಡ ನಾಟಕ ಎಂದ ಕಾಂಗ್ರೆಸ್‌ ಸಂಸದ ಅನಿಲ್ ಕುಮಾರ್‌

Sampriya

ಮಂಗಳವಾರ, 2 ಸೆಪ್ಟಂಬರ್ 2025 (18:05 IST)
Photo Credit X
ಹೈದರಾಬಾದ್: ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಕೆ.ಕವಿತಾ ಅವರನ್ನು ಪಕ್ಷದಿಂದ ಅಮಾನತುಗೊಳಿಸಿದ ಕೆಲವೇ ಗಂಟೆಗಳ ನಂತರ  ಕಾಂಗ್ರೆಸ್ ಸಂಸದ ಮಂಡಾಡಿ ಅನಿಲ್ ಕುಮಾರ್ ಯಾದವ್ ಅವರ ಹೇಳಿಕೆ ಇದೀಗ ಸುದ್ದಿಯಾಗಿದೆ. 

ಈ ಅಮಾನತು ಪ್ರಕ್ರಿಯೆ  “ಕುಟುಂಬದ ದೊಡ್ಡ ನಾಟಕ” ಎಂದು ಕರೆದರು. 

ಪಕ್ಷ ವಿರೋಧಿ ಚಟುವಟಿಕೆಗಳಿಂದ" ತಕ್ಷಣವೇ ಜಾರಿಗೆ ಬರುವಂತೆ ಬಿಆರ್‌ಎಸ್ ಎಂಎಲ್‌ಸಿ ಕೆ ಕವಿತಾ ಅವರನ್ನು ಪಕ್ಷದಿಂದ
ಅಮಾನತುಗೊಂಡಿದೆ.

ಪಕ್ಷದ ಅಧ್ಯಕ್ಷ ಕೆ.ಚಂದ್ರಶೇಖರ್ ರಾವ್ ಅವರು ಈ ನಿರ್ಧಾರ ಕೈಗೊಂಡಿದ್ದು, ಅವರ ನಡವಳಿಕೆ ಮತ್ತು ಕಾರ್ಯಗಳು ಪಕ್ಷದ ಪ್ರತಿಷ್ಠೆಗೆ "ಹಾನಿ" ತಂದಿವೆ ಎಂದು ಹೇಳಿದ್ದಾರೆ. 



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ