ಪೀಣ್ಯ ಫ್ಲೈ ಓವರ್ ಮೇಲೆ ಭಾರಿ ವಾಹನಗಳ ಸಂಚಾರಕ್ಕೆ ಮತ್ತೆ ಬ್ರೇಕ್
ಮಂಗಳವಾರ, 11 ಏಪ್ರಿಲ್ 2023 (17:05 IST)
ರಾಜ್ಯದ 18 ಜಿಲ್ಲೆ ಸಂಪರ್ಕಿಸುವ ಪೀಣ್ಯ ಮೇಲ್ಸೇತುವೆ ಒಂದೂವರೆ ವರ್ಷದಿಂದ ಲಾರಿ ಬಸ್ಗಳಿಗೆ ಬಂದ್ ಆಗಿದೆ. ಕೇವಲ ಲಘು ವಾಹನಗಳು ಮಾತ್ರ ಸಂಚರಿಸುತ್ತಿವೆ. ಈ ಬಗ್ಗೆ ಪಿನ್ ಟು ಪಿನ್ ಅಧ್ಯಯನ ಮಾಡಿದ IISC ವರದಿ ನೀಡಿದ್ದು. ಎರಡು ಹಂತದ ಕಾಮಗಾರಿ ಮಾಡಲು ಸಲಹೆ ನೀಡಿದೆ. ಏಫ್ರಿಲ್ 20 ರಿಂದ ಮೊದಲ ಹಂತದ ಕಾಮಗಾರಿ ಆರಂಭವಾಗಲಿದ್ದು, ಈ ವರ್ಷ ಕೊನೆಯವರೆಗೂ ಫ್ಲೈ ಓವರ್ ಮೇಲೆ ಭಾರಿ ವಾಹನಗಳ ಸಂಚಾರಕ್ಕೆ ಮತ್ತೆ ಬ್ರೇಕ್ ಬಿಳಲ್ಲಿದೆ.
ತುಮಕೂರು ರಸ್ತೆಯ ಗೊರಗುಂಟೆಪಾಳ್ಯದಿಂದ ನಾಗಸಂದ್ರದ ಪಾರ್ಲೆ ಜಿ ಫ್ಯಾಕ್ಟರಿವರೆಗೂ 5 ಕಿ.ಮೀ. ಉದ್ದ ನಿರ್ಮಿಸಿರುವ ಮೇಲ್ಸೇತುವೆಯಲ್ಲಿ 120 ಪಿಲ್ಲರ್ಗಳಿದ್ದು ಭಾರ ತಡೆಯಲು ಎರಡು ಪಿಲ್ಲರ್ಗಳ ನಡುವೆ 10 ಕೇಬಲ್ ಅಳವಡಿಸಲಾಗಿತ್ತು. ಆದ್ರೀಗ ಮೇಲ್ಸೇತುವೆಯಲ್ಲಿ ಬಾಗಿರುವ ಕೇಬಲ್ಗಳು ಮಾತ್ರವಲ್ಲದೇ 5 ಕಿಲೋ ಮೀಟರ್ ಉದ್ದದ ಸೇತುವೆಯಲ್ಲಿ ಎಲ್ಲಾ ಕೇಬಲ್ಗಳನ್ನೂ ಬದಲಿಸಲು ಎನ್ಎಚ್ಎಐ ನಿರ್ಧರಿಸಿದೆ. ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರ ಸಲಹೆಯಂತೆ ಎರಡು ಹಂತಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ.
ಸಿಲಿಕಾನ್ ಸಿಟಿಗೆ ಹೆಬ್ಬಗಿಲ್ಲಿಗಿರೋ ಪೀಣ್ಯ ಪ್ಲೈಓವರ್ ಇನ್ನೂ ಕೂಡ ಭಾರಿ ವಾಹನಗಳಿಗೆ ಎಂಟ್ರಿ ಸಿಕ್ಕಿಲ್ಲ, ಕಳೆದ ಒಂದು ವರ್ಷದಿಂದ ಫ್ಲೈಓವರ್ ನ್ನ ಕೆಲವು ಕೇಬಲ್ ತುಕ್ಕು ಹಿಡಿದಿದೆ ಅಂತ ರಾಷ್ಟ್ರಿಯ ಹೆದ್ದರಿ ಪ್ರಾಧಿಕಾರ ಭಾರಿ ವಾಹನ್ಳ ಸಂಚಾರಕ್ಕೆ ಬ್ರೇಕ್ ಹಾಕಿತ್ತು , ಅದ್ರೆ ಈಗ ಈ ಫ್ಲೈಓವರ್ ಬಗ್ಗೆ IISC ರಿಪೋರ್ಟ ನೀಡಿದ್ದು , ಈ ಸೇತುವೆಗೆ ಸಂಭಂದಿಸಿದಂತೆ ಎಲ್ಲಾ ಪೀಲರ್ ಗಳ ಕೇಬಲ್ ಬದಲಿಸಿ, ಹಲವು ಫಿಲರ್ ಗಳಲ್ಲಿ ಕೇಬಲ್ ಗಳು ತುಕ್ಕು ಹಿಡಿದೆ, ಅಲ್ಲದೆ ಈಗಾಗಲೇ ಇರುವ ಕೇಬಲ್ಗಳು ಭವಿಷ್ಯದಲ್ಲಿ ತುಕ್ಕು ಹಿಡಿಯಬಹುದು ಎಂಬ ಕಾರಣಕ್ಕೆ ಎಲ್ಲಾ ಕೇಬಲ್ ಬದಲಿಸಬೇಕು ಎಂಬ ಶಿಫಾರಸನ್ನು ಐಐಎಸ್ಸಿ ಮಾಡಿದೆ. ಹೀಗಾಗಿ ಮೇಲ್ಸೇತುವೆಯಲ್ಲಿ ಬಾಗಿರುವ ಕೇಬಲ್ಗಳು ಮಾತ್ರವಲ್ಲದೇ 5 ಕಿಲೋ ಮೀಟರ್ ಉದ್ದದ ಸೇತುವೆಯಲ್ಲಿ ಎಲ್ಲಾ ಕೇಬಲ್ಗಳನ್ನೂ ಬದಲಿಸಿದರೆ ಭಾರಿ ವಾಹನಗಳ ಓಡಾಟಕೆ ಯೋಗ್ಯವಾಗಿರುತ್ತೆ ಅಂತ ವರದಿಯಲ್ಲಿ ಸೂಚಿಸಿದೆ.
ಹೆಚ್ಚುವರಿ ಕೇಬಲ್ ಅಳವಡಿಸಲು ಸುಮಾರು 8 ತಿಂಗಳು ಸಮಾಯಾವಕಾಶ ಬೇಕಿದೆ. ಈ ಸಮಯದಲ್ಲಿ ಮೇಲ್ಸೇತುವೆ ಮೇಲೆ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತೆ. ಈ ಕಾರ್ಯ ಮುಗಿದ ನಂತರ ಭಾರೀ ವಾಹನಗಳ ಸಂಚಾರಕ್ಕೂ ಮೇಲ್ಸೇತುವೆ ಮುಕ್ತವಾಗಲಿದೆ. ಬಳಿಕ ಪ್ರತಿ ಎರಡು ಪಿಲ್ಲರ್ಗಳ ನಡುವೆ ಇರುವ 10 ಕೇಬಲ್ಗಳನ್ನೂ ಬದಲಾಯಿಸಲಾಗುವುದು. 1200 ಕೇಬಲ್ ಅಳವಡಿಕೆಗೆ ಒಂದೂವರೆ ವರ್ಷ ಬೇಕಾಗಲಿದೆ.ನಂತರದ ದಿನಗಳಲ್ಲಿ ಭಾರಿ ವಾಹನ ಓಡಾಟಕ್ಕೆ ಅವಕಾಶವಿದೆ ಅಂತ ವರದಿ ನೀಡಿದರೆ,ಕಳೆದ ಒಂದೂವರೆ ವರ್ಷದಿಂದ ಭಾರೀ ವಾಹನಗಳ ಪಾಲಿಗೆ ಮುಚ್ಚಿದ್ದ ಮೇಲ್ಸೆತುವೆ...ಮುಂದಿನ 8 ತಿಂಗಳಿನಲ್ಲಿ ತೆರೆಯಲಾಗುತ್ತೆ. ಅದಷ್ಟೂ ಬೇಗ ಗುಣಮಟ್ಟದ ಕಾಮಗಾರಿ ಮಾಡಿ...ವಾಹನ ಸಂಚಾರಕ್ಕೆ ಅನವು ಮಾಡಿ, ಸುತ್ತಮುತ್ತ ಟ್ರಾಫಿಕ್ಗೆ ಕಡಿವಾಣ ಹಾಕಬೇಕು ಎನ್ನುವುದು ಸ್ಥಳೀಯರ ಆಗ್ರಹ