ಹೊಸ ವರ್ಷಕ್ಕೆ ಬ್ರೇಕ್ ಬೀಳುವ ಸಾಧ್ಯತೆ..!

ಬುಧವಾರ, 8 ಡಿಸೆಂಬರ್ 2021 (19:59 IST)
ನಗರದಲ್ಲಿ ಕೊರೊನಾ ಒಂದು ಕಡೆಯಾದ್ರೆ ಮತ್ತೊಂದು ಕಡೆ ಒಮಿಕ್ರಾನ್ ಭೀತಿ ಹೆಚ್ಚಾಗಿದೆ. ಹೀಗಾಗಿ ಹೊಸ ವರ್ಷ ಹಾಗೂ ಕ್ರಿಸ್ ಮಸ್ ಆಚರಣೆಗೆ ಅವಕಾಶ ಕೊಡಬೇಕೋ ಬೇಡ್ವೋ ಅನ್ನೋ ಚರ್ಚೆ ಆರಂಭವಾಗಿದೆ. ಈ ವಿಚಾರವಾಗಿ ಇಂದು ಮಾತನಾಡಿದ ಡಿ.ಸಿ.ಮಂಜುನಾಥ್, ಹೊಸ ವರ್ಷ, ಕ್ರಿಸ್ ಮಸ್ ಬಗ್ಗೆ ತಾಂತ್ರಿಕ ಸಲಹಾ  ಸಮಿತಿ ಡಿಸೈಡ್ ಮಾಡಿ ಸರ್ಕಾರಕ್ಕೆ ಹೇಳಲಿದ್ದಾರೆ. ಸಿಎಂ ನೀಡಿದ ಆದೇಶ ನಾವು ಪಾಲನೆ ಮಾಡ್ತೇವೆ. ಆದರೆ ನಾನು ಮನವಿ ಮಾಡ್ತೀನಿ. ಜನರು ಮನೆಯಲ್ಲಿ ಹೊಸ ವರ್ಷ ಆಚರಣೆ ಮಾಡಬೇಕು. ಗುಂಪು ಗುಂಪಾಗಿ ಸೇರಬಾರದು ಎಂದರು. ಕೊರೊನಾ ಕುರಿತಂತೆ ಮಾತನಾಡಿದ ಅವರು ಬಿಬಿಎಂಪಿಯ ಮುಖ್ಯ ಆಯುಕ್ತ ನೇತೃತ್ವದಲ್ಲಿ ಕೆಲವು ಕ್ರಮಗಳು ತೆಗೆದುಗೊಂಡಿವೆ. ಟೆಸ್ಟ್ಂಗ್ ಸಂಖ್ಯೆ ಹೆಚ್ಚಳ ಮಾಡಿದ್ದೇವೆ. ಕೆಲವೊಂದು ಕ್ಲಸ್ಟರ್ ಆಗಿವೆ.  ಬೋರ್ಡಿಂಗ್ ಸ್ಕೂಲ್, ಹಾಸ್ಟೆಲ್, ಶಾಲೆಗಳಲ್ಲಿ ಟೆಸ್ಟಿಂಗ್ ಹೆಚ್ಚಳ ಮಾಡಿದ್ದೇವೆ ಎಂದರು. ಬೆಂಗಳೂರು ಹೊರಗಿನ ಪ್ರದೇಶದಲ್ಲಿ ಕಟ್ಟು ನಿಟ್ಟಿನ ಕ್ರಮ ವಹಿಸಲಾಗಿದೆ. ಶಾಲೆಗಳಲ್ಲಿ ಕ್ಲಸ್ಟರ್ ಕೇಸ್ ಗಳು ಪತ್ತೆಯಾಗಿವೆ. ಒಂದು ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿಗೆ ಬಂದಿತ್ತು. ನಂತರ ಇಡೀ ಶಾಲೆಯಲ್ಲಿ ಇರುವವರಿಗೆ ಎಲ್ಲರಿಗೂ ಟೆಸ್ಟ್ ಮಾಡಲಾಗಿದೆ. ಇದರಲ್ಲಿ ಕೆಲವರಿಗೆ ಪಾಸಿಟಿವ್ ಆಗಿತ್ತು. ಅವರನ್ನು ಐಸೋಲೇಟ್ ಮಾಡಿ ಚಿಕಿತ್ಸೆ ನೀಡಿದ್ದೇವೆ. ಸ್ಪೂರ್ತಿ ನರ್ಸಿಂಗ್ ಹೋಂ ನಲ್ಲಿ ಒಬ್ಬರಿಗೆ ಪಾಸಿಟಿವ್ ಬಂದಿತ್ತು. ಆ ನರ್ಸಿಂಗ್ ಹೋಂ ನ 500 ಜನರಿಗೆ ಟೆಸ್ಟ್ ಮಾಡಲಾಯಿತು. ಇದರಲ್ಲಿ 12 ಜನರಿಗೆ ಪಾಸಿಟಿವ್ ಬಂದಿದೆ. ಐಸೋಲೇಷನ್ ಮಾಡಲಾಗಿದೆ. ಸುಮಾರು 50 ಜನರ ಸ್ವಾಬ್ ಅನ್ನು ಜಿನೋಮ್ ಸೀಕ್ವೆನ್ಸ್ ಗೆ ಕಳುಹಿಸಲಾಗಿದೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ