ಹೊಸ ವರ್ಷದ ದಿನವೇ ಹೊಸ ಸುದ್ದಿ ಕೊಡಲಿರುವ ಸ್ಟಾರ್ ಗಳು

ಶುಕ್ರವಾರ, 1 ಜನವರಿ 2021 (09:05 IST)
ಬೆಂಗಳೂರು: ಇಂದು ಹೊಸ ವರ್ಷದ ಮೊದಲ ದಿನ. ಹೀಗಾಗಿ ಈ ವಿಶೇಷ ದಿನದಂದು ನಮ್ಮ ಸ್ಯಾಂಡಲ್ ವುಡ್ ತಾರೆಯರು ತಮ್ಮ ಸಿನಿಮಾಗಳ ಟೈಟಲ್, ಪೋಸ್ಟರ್, ಟೀಸರ್ ಬಿಡುಗಡೆ ಮಾಡುವ ಮೂಲಕ ವಿಶೇಷವಾಗಿ ಮಾಡುತ್ತಿದ್ದಾರೆ.


ಇಂದು ಹೊಸ ಸುದ್ದಿ ಕೊಡಲಿರುವ ಸ್ಟಾರ್ ಸಿನಿಮಾಗಳಲ್ಲಿ ಮೊದಲನೆಯದ್ದು ದುನಿಯಾ ವಿಜಯ್ ಮೊದಲ ಬಾರಿ ನಿರ್ದೇಶಿಸಿ ನಟಿಸಿದ ‘ಸಲಗ’. ಸಲಗ ಸಿನಿಮಾದ ಚಿತ್ರೀಕರಣವೆಲ್ಲವೂ ಮುಗಿದಿದ್ದು, ಇಂದು ಟೈಟಲ್ ಹಾಡನ್ನು ಎ2 ಯೂಟ್ಯೂಬ್ ಚಾನೆಲ್ ಮೂಲಕ ಲಾಂಚ್ ಮಾಡುತ್ತಿದೆ.

ಎರಡನೆಯದಾಗಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಜೋಡಿ ಕಡೆಯಿಂದ ಹೊಸ ಸುದ್ದಿ ಬರಲಿದೆ. ಈ ಜೋಡಿ ಜೊತೆಯಾಗಿ ಅಭಿನಯಿಸಲಿರುವ ಹೊಸ ಸಿನಿಮಾದ ಟೈಟಲ್ ಲಾಂಚ್ ಇಂದು ಬೆಳಿಗ್ಗೆ 9.30 ಕ್ಕೆ ನಡೆಯಲಿದೆ.

ಇಷ್ಟೇ ಅಲ್ಲ, ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಮದಗಜ ಸಿನಿಮಾದ ತೆಲುಗು ಟೀಸರ್ ಇಂದು ಲಾಂಚ್ ಆಗುತ್ತಿದೆ. ಅದೇ ರೀತಿ ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ಅಭಿನಯದ ಪೊಗರು ಸಿನಿಮಾದ ತೆಲುಗು ಮತ್ತು ತಮಿಳು ಅವತರಣಿಕೆಯ ಡೈಲಾಗ್ ಟೀಸರ್ ಇಂದು ಮಧ‍್ಯಾಹ್ನ 12.30 ಕ್ಕೆ ಲಾಂಚ್ ಮಾಡುತ್ತಿದ್ದಾರೆ. ಹಿರಿಯ ನಿರ್ದೇಶಕ ಎಸ್ ನಾರಾಯಣ್ ಬಹಳ ದಿನಗಳ ನಂತರ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾದ ಟೈಟಲ್ ಕೂಡಾ ಇಂದು ಲಾಂಚ್‍ ಆಗುತ್ತಿದೆ. ಹೀಗಾಗಿ ಸ್ಯಾಂಡಲ್ ವುಡ್ ಪಾಲಿಗೆ ಇಂದು ಹೊಸ ವರ್ಷದ ಜೊತೆಗೆ ಹೊಸ ಸುದ್ದಿಗಳ ಜಾತ್ರೆಯಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ