ಕೊರೊನಾ ಕಾಲಘಟದಲ್ಲಿ ಒತ್ತಡ ಲೈಫ್ ನಿಂದ ಪಾರಗಲು ಟಿನೇಜ್ ಹುಡಗಿಯರು ನಾನಾ ಕಸರತ್ತು ಚಟಗಳಿಗೆ ಬಲಿಯಾಗುತ್ತಿದ್ದು ಅದರಲ್ಲಿ ಮದ್ಯ ಹಾಗೂ ಧೂಮಪಾನ ಕೂಡಾ ಒಂದು . ಹೌದು ಕಳೆದೊಂದು ವರ್ಷದಲ್ಲಿ ಮದ್ಯ ಹಾಗೂ ಧೂಮಪಾನ ಮಾಡುವ ಮಹಿಳೆ ಸಂಖ್ಯೆ ಹೆಚ್ಚಾಗಿದೆಯಂತೆ.. ಇದರ ಜೊತೆಗೆ ಇನ್ನು ಕೆಲವು ಮಹಿಳೆಯರು ವಯಸ್ಸಾದ್ರೂ ಯಂಗ್ ಅ್ಯಂಡ್ ಬ್ಯೂಟಿಪುಲ್ ಆಗಿ ಕಾಣಲು ಪಾಶ್ಚಿಮಾತ್ಯ ಡಯಟ್ ಪ್ಲಾನ್ ಮೊರೆ ಹೋಗುತ್ತಿದ್ದು.. ಇದೇ ಈಗ ಮಹಿಳೆಯರ ಪ್ರಾಣ ತಗೆಯವ ಸ್ತನ ಕ್ಯಾನ್ಸರ್ ಗೆ ಕಾರಣವಾಗುತ್ತಿದೆ.
ಗ್ರಾಮೀಣ ಭಾಗದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಬಗ್ಗೆ ಇರುವ ಮೂಡನಂಭಿಕೆ ಹಾಗೂ ತಿಳುವಳಿಕೆ ಕೊರತೆ ಕೂಡಾ ಸ್ತನ ಕ್ಯಾನ್ಸರ್ ಹೆಚ್ಚಳಕ್ಕೆ ಕಾರಣವಾಗಿದ್ದು ಸಾಕಷ್ಟು ಮಹಿಳೆಯರು ಕೊನೆಯ ಹಂತದಲ್ಲಿ ಸ್ತನ ಕ್ಯಾನ್ಸರ್ ಬೆಳಕಿಗೆ ಬಂದು ಸಾವಿಗೆ ಕಾರಣವಾಗ್ತೀರುವ ಬಗ್ಗೆ ಕಿದ್ವಾಯಿ ಆಸ್ಪತ್ರೆಯ ವೈದ್ಯರು ಆತಂಕ ಹೊರ ಹಾಕ್ತೀದ್ದಾರೆ.. ಸಿಟಿಯಲ್ಲಿ ಕಳೆದ ವರ್ಷಗಳಿಂದ ಏರಿಕೆಯಯಾಗ್ತೀರೊ ಸ್ತನ ಕ್ಯಾನ್ಸರ್ ಬಗ್ಗೆ ಕಿದ್ವಾಯಿ ಆಸ್ಪತ್ರೆ ಆಶ್ವರ್ಯಕರ ಮಾಹಿತಿ ಹೊರಕ್ಕೆ ಹಾಕಿದ್ದು.. ಸಿಲಿಕಾನ್ ಸಿಟಿ ಬೆಂಗಳೂರಿನ ಮಹಿಳೆಯರಲ್ಲಿ ಕೊರೊನಾಕ್ಕೂ ಮೊದಲು ವರ್ಷಕ್ಕೆ 700 ರಿಂದ 750 ಸ್ತನ ಕ್ಯಾನ್ಸರ್ ಪತ್ತೆಯಾಗ್ತಾ ಇದ್ರೆ ಈ ವರ್ಷ ಜನೇವರಿಯಿಂದ ಇಲ್ಲಿಯವರೆಗೆ 1012 ಸ್ತನ ಕೇಸ್ ಕಾಣಿಸಿಕೊಂಡಿದೆ.. ಅದರಲ್ಲೂ ಹೆಚ್ಚಾಗಿ ಮದ್ಯವಯಸ್ಸಿನ ಮಹಿಳೆಯರು 3ನೇ ಹಂತ ಅಥವಾ 4ನೇ ಹಂತ ಸ್ಥಿತಿಗಳಲ್ಲಿ ಸ್ತನದ ಕ್ಯಾನ್ಸರ್ ಪತ್ತೆಯಾಗ್ತೀರೊದು ಸಾಕಷ್ಟು ಸಾವಿಗೆ ಕಾರಣವಾಗ್ತೀದೆ ಹೀಗಾಗಿ ಮಹಿಳೆಯರು ಪ್ರತಿ ತಿಂಗಳು ಒಂದು ಸರಿ ತಮ್ಮನ್ನು ತಾವು ಪರೀಕ್ಷೆ ಮಾಡಿಕೊಳ್ಳುವುದು ಉತ್ತಮ ಅವಶ್ಯ ಅಂತಿದ್ದಾರೆ ವೈದ್ಯರು.
ಹಾರ್ಮೋನು ಬದಲಾವಣೆಯ ಚಿಕಿತ್ಸೆ
ಬೊಜ್ಜು, ತೂಕ ಹೆಚ್ಚಾಗುವುದು ಹಾಗೂ ಕೊಬ್ಬಿನ ಅಂಶ ಸ್ತನ ಕ್ಯಾನ್ಸರ್ ಗೆ ಕಾರಣವಾಗಿದೆ