ಆರತಕ್ಷತೆಗಿದ್ದ ವಧು ಮದುವೆ ವೇಳೆ ನಾಪತ್ತೆ
ನಿನ್ನೆ ರಾತ್ರಿ ಆರತಕ್ಷತೆ ವೇಳೆ ಇದ್ದ ಯುವತಿ ಬೆಳಿಗ್ಗೆ ಮದುವೆ ಮುಹೂರ್ತದ ವೇಳೆ ನಾಪತ್ತೆಯಾಗಿದ್ದಾಳೆ. ಇದರಿಂದಾಗಿ ಮದುವೆ ಅರ್ಧಕ್ಕೇ ನಿಂತಿದೆ.
ಸುರೇಶ್ ಎಂಬವರ ಜೊತೆ ಯುವತಿಯ ಮದುವೆ ನಿಶ್ಚಯವಾಗಿತ್ತು. ಆದರೆ ಈಗಾಗಲೇ ಪ್ರವೀಣ್ ಎಂಬಾತನ ಜೊತೆ ಪ್ರೇಮ ಸಂಬಂಧ ಹೊಂದಿದ್ದ ಯುವತಿ ಆತನ ಜೊತೆಗೇ ಎಸ್ಕೇಪ್ ಆಗಿದ್ದಾಳೆ ಎನ್ನಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.