ದುಬಾರಿ ವಾಚ್ ಕೊಡಿಸುತ್ತೇನೆಂದು ರಿಷಬ್ ಪಂತ್ ಗೆ ವಂಚನೆ: ಕ್ರಿಕೆಟಿಗನ ಬಂಧನ
ವಾಚ್, ಜ್ಯುವೆಲ್ಲರಿ ಕೊಡಿಸುತ್ತೇನೆಂದು ಹಣ ಪಡೆದಿದ್ದ ಮೃಣಾಂಕ್ ಕೊನೆಗೆ ವಸ್ತುವೂ ಕೊಡಲಿಲ್ಲ, ಹಣವನ್ನೂ ಮರಳಿಸಲಿಲ್ಲ. ಮೃಣಾಂಕ್ ನೀಡಿದ್ದ ಚೆಕ್ ಕೂಡಾ ಬೌನ್ಸ್ ಆಗಿತ್ತು.
ಈ ಹಿನ್ನಲೆಯಲ್ಲಿ ರಿಷಬ್ ಪರ ವಕೀಲರು ದೂರು ಸಲ್ಲಿಸಿದ್ದರು. ಐಪಿಎಲ್ ನಲ್ಲೂ ಆಡಿರುವ ಮೃಣಾಂಕ್ ಸದ್ಯಕ್ಕೆ ವಂಚನೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ.