ಸಾವಿನಲ್ಲೂ ಒಂದಾದ ಅಕ್ಕ- ತಮ್ಮ

ಮಂಗಳವಾರ, 8 ನವೆಂಬರ್ 2016 (08:44 IST)
ಕಾರು ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾಗಿ ಅಕ್ಕ-ತಮ್ಮ ಇಬ್ಬರು ದುರಂತ ಸಾವು ಕಂಡ ಹೃದಯವಿದ್ರಾವಕ ಘಟನೆ ಮಂಗಳೂರಿನ ಬಜತ್ತೂರು ಗ್ರಾಮದ ಬಳಿ ನಡೆದಿದೆ.
 
ಮೃತರನ್ನು ಬಂಟ್ವಾಳದ ಬಾಳ್ತಿಲ ಗ್ರಾಮದ ನಿವಾಸಿ ಜನಾರ್ಧನ ಆಚಾರ್ಯ ಅವರ ಮಕ್ಕಳಾದ ಅಕ್ಷತಾ (25) ಮತ್ತು ಶಿವಾನಂದ(19)ಎಂದು ಗುರುತಿಸಲಾಗಿದೆ.
 
ಅಪಘಾತದಿಂದ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಹಾಸನ ಮೂಲದ ಒಂದೇ ಕುಟುಂಬದ ನಾಲ್ವರು ಗಾಯಗೊಂಡಿದ್ದು ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
 
ಗಾಯಗೊಂಡವರನ್ನು ಶಿವಯ್ಯ(55), ತಾಯಿ ಕಮಲಮ್ಮ(50), ಸರ್ವಮಂಗಳ (60) ಹರ್ಷ(30), ಅವರ ಪತ್ನಿ ಶುಭಶ್ರೀ (25) ಎಂದು ಗುರುತಿಸಲಾಗಿದೆ. 
 
ಶಿವಾನಂದ ಮತ್ತು ಅಕ್ಷತಾ ತಮ್ಮ ಸಂಬಂಧಿಕರ ಮನೆಗೆ ಹೋಗಿ ವಾಪಸ್ಸಾಗುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.
 
ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.
 

ವೆಬ್ದುನಿಯಾವನ್ನು ಓದಿ