ಮೈತ್ರಿ ಸರಕಾರ ವರ್ಗಾವಣೆ ದಂಧಗೆ ಸೀಮಿತ ಎಂದ ಬಿಎಸ್ ವೈ

ಭಾನುವಾರ, 16 ಸೆಪ್ಟಂಬರ್ 2018 (17:41 IST)
ಮೈತ್ರಿ ಸರ್ಕಾರ ಕೇವಲ ವರ್ಗಾವಣೆ ದಂಧೆಗೆ ಸೀಮಿತವಾಗಿದ್ದು ಜನರ, ರೈತರ ಹಿತ  ಮರೆತಿದೆ ಇದು ಅಕ್ಷಮ್ಯ ಅಪರಾಧ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.

ತುಮಕೂರಿನ ಸಿದ್ದಗಂಗಾ ಮಠದಲ್ಲಿ ಮಾತನಾಡಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ರಾಷ್ಟ್ರೀಕೃತ  ಬ್ಯಾಂಕ್ ಸಾಲ ಮನ್ನಾ ಮಾಡುತ್ತೇವೆ ಎಂದು‌ ಬೊಬ್ಬೆ ಹೊಡೆದರು. ನಾಲ್ಕು ವರ್ಷದಲ್ಲಿ ನಾಲ್ಕು ಕಂತುಗಳಲ್ಲಿ ಸಾಲ ತಿರಿಸುತ್ತೇವೆ ಅಂದ್ರೆ ಯಾರು ಕಾಯ್ತಾರೆ? ಹಣ ತುಂಬದೆ ಸಹಕಾರಿ ಕ್ಷೇತ್ರವು ದಿವಾಳಿ ಸ್ಥಿತಿಗೆ ಬಂದಿದೆ. ರಾಷ್ಟ್ರೀಕೃತ ಬ್ಯಾಂಕ್ ಗಳು ರೈತರಿಗೆ ನೋಟಿಸ್ ನೀಡುತ್ತಿವೆ. ಮುಖ್ಯಮಂತ್ರಿ ಕುಮಾರಸ್ವಾಮಿ ರಾಜಕೀಯ  ದೊಂಬರಾಟ ಮಾಡಿಕೊಂಡು ಸುಳ್ಳು ಭರವಸೆ ನೀಡಿಕೊಂಡು ಒಡಾಡುತ್ತಿದ್ದಾರೆ ಎಂದರು.

ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ನ ಭಿನ್ನಾಬಿಪ್ರಾಯಗಳನ್ನ ಬಗೆಹರಿಸಿಕೊಳ್ಳುವುದರಲ್ಲಿ ತಲ್ಲೀನರಾಗಿದ್ದಾರೆ ಎಂದರು.
ಜಾರಕಿಹೋಳಿ ಸಹೋದರರು ಬಿಜೆಪಿಗೆ ಸೇರುವ ವಿಚಾರ ಕುರಿತು ಪ್ರತಿಕ್ರಿಯಿಸಿದ್ದು, ನಾನು ಸಷ್ಪಪಡಿಸುತ್ತೇನೆ ಆ ವಿಚಾರದ ಬಗ್ಗೆ ನಾನು ಏನೂ ಮಾತನಾಡಿಲ್ಲ. ಕಾಂಗ್ರೆಸ್ ನ ಒಳಜಗಳಕ್ಕೂ ಬಿಜೆಪಿಗೂ ಸಂಭಂದವಿಲ್ಲ. ಯಾರು ಹೊಗ್ತಾರೋ ಬರ್ತಾರೋ ಅದು ಕಾಂಗ್ರೆಸ್,  ಜೆಡಿಎಸ್ ಮುಖಂಡರಿಗೆ  ಸಂಬಂಧಪಟ್ಟಿದ್ದು, ಬಿಜೆಪಿ‌ಗೆ ಸಂಬಂಧವಿಲ್ಲ. ಬಿಜೆಪಿ 104 ಕ್ಷೇತ್ರದಲ್ಲಿ ಗೆದ್ದಿದ್ದೇವೆ. ಜನರ ಆಶೀರ್ವಾದ ಇದೆ. ಪ್ರತಿಪಕ್ಷವಾಗಿ ಕೆಲಸ ಮಾಡ್ತೇವೆ ಎಂದರು.

ರಿಯಲ್ ಎಸ್ಟೇಟ್ ಬಡ್ಡಿಕೋರರ ಬಳಕೆ ವಿಚಾರವಾಗಿ ಸಿಎಂ ಬೇಜಾವಾಬ್ದಾರಿ ಆರೋಪ ಮಾಡ್ತಿದ್ದಾರೆ. ಆ ರೀತಿ  ಮಾಹಿತಿ ಇದ್ದರೆ ಅವರನ್ನ ಬಂಧಿಸಿ ದಂಧೆ ನಡೆಯೋದು ತಡೆಯಬೇಕು. ಇಸ್ಪೇಟ್ , ಜೂಜು ಕೋರರ ತಡೆಯಲು ಇವರು ಏನ್ ಮಾಡ್ತಿದ್ದಾರೆ. ಅದಕ್ಕೂ ನಮಗೂ ಏನ್ ಸಂಬಂಧ ಇದೆ? ಅದನ್ನ ತಡೆಯಲು ಮುಂದಾಗಬೇಕು ಹೊರತು  ಬಿಜೆಪಿ ಮೇಲೆ ಆರೋಪ ಮಾಡಬಾರದು. ವಿನಾಕಾರಣ ಇಂತಹ ಆರೋಪ ಸರಿಯಲ್ಲ ಎಂದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ