ತಪ್ಪು ನಿಮ್ಮಲ್ಲೇ ಇಟ್ಕೊಂಡು ನಮ್ಮನ್ನು ಯಾಕೆ ದೂಷಿಸ್ತೀರಿ? ಬಿಜೆಪಿ ಪ್ರಶ್ನೆ
ನಿಮ್ಮ ಇಡೀ ಸರ್ಕಾರ ಡಿಕೆ ಶಿವಕುಮಾರ್ ಮತ್ತು ಎಚ್ ಡಿ ಕುಮಾರಸ್ವಾಮಿ ಕುಟುಂಬದ ಪ್ರಭಾವಿ ಹಿಡಿತದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಅವರ ಶಾಸಕರ ಧ್ವನಿ ಬಲವಂತವಾಗಿ ಅಡಗಿಸಿರುವಾಗ ಅವರು ಹೇಗೆ ಸ್ವತಂತ್ರವಾಗಿ ಕೆಲಸ ಮಾಡಲು ಸಾಧ‍್ಯ? ರಾಜ್ಯ ಸರ್ಕಾರದ ಗೊಂದಲಗಳಿಗೆ ನಾವು ಕಾರಣರಲ್ಲ. ನಿಮ್ಮಲ್ಲೇ ತಪ್ಪುಗಳಿವೆ ಎಂದು ಕರ್ನಾಟಕ ಬಿಜೆಪಿ ಟ್ವಿಟರ್ ಮೂಲಕ ತಿರುಗೇಟು ನೀಡಿದೆ.
ಇನ್ನು ಬಿಜೆಪಿ ರಾಜ್ಯಾಧ‍್ಯಕ್ಷ ಯಡಿಯೂರಪ್ಪ ಕೂಡಾ ಇದೇ ಅರ್ಥದಲ್ಲಿ ಮಾತನಾಡಿದ್ದಾರೆ. ಶಾಸಕರ ಕುದುರೆ ವ್ಯಾಪಾರದ ಕುರಿತು ಐಟಿ ವಿಭಾಗಕ್ಕೆ ದೂರು ನೀಡಿರುವ ಕಾಂಗ್ರೆಸ್ ಈ ಮೂಲಕ ತನ್ನ ದಿವಾಳಿತನ ತೋರಿಸಿಕೊಂಡಿದೆ ಎಂದು ಯಡಿಯೂರಪ್ಪ ಟೀಕಿಸಿದ್ದಾರೆ.