ಪ್ರಧಾನಿ ಮೋದಿ ಫೋಟೋ ಬಗ್ಗೆ ತುಚ್ಛವಾಗಿ ಕಾಮೆಂಟ್ ಮಾಡಿದ ರಮ್ಯಾಗೆ ಬಿಜೆಪಿ ತಿರುಗೇಟು
ಪ್ರಧಾನಿ ಮೋದಿ ಬಿಳಿ ಉಡುಗೆ ತೊಟ್ಟುಕೊಂಡು ಸರ್ದಾರ್ ವಲ್ಲಭಾಯಿ ಪಟೇಲ್ ರ ಏಕತಾ ಪ್ರತಿಮೆ ಕಾಲ ಬುಡದಲ್ಲಿ ನಿಂತು ಫೋಟೋಗೆ ಪೋಸ್ ನೀಡಿದ್ದರು. ಈ ಫೋಟೋವನ್ನು ಟ್ವೀಟ್ ಮಾಡಿದ ರಮ್ಯಾ ‘ಅದು ಹಕ್ಕಿ ಪಿಕ್ಕೆಯಾ?’ ಎಂದು ಪ್ರಧಾನಿ ಮೋದಿ ಕುರಿತು ಕಾಮೆಂಟ್ ಮಾಡಿದ್ದರು.
ರಮ್ಯಾ ಕಾಮೆಂಟ್ ಗೆ ಬಿಜೆಪಿ ತಿರುಗೇಟು ನೀಡಿದ್ದು ‘597 ಅಡಿಯ ಈ ಬೃಹತ್ ಪ್ರತಿಮೆಯ ನಡುವೆ ಈ ಮಹಿಳೆ ಹಕ್ಕಿ ಪಿಕ್ಕೆಯನ್ನೇ ಹುಡುಕುತ್ತಿದ್ದಾಳೆ. ಕೆಲವು ಮಂದಿಯ ಆಲೋಚನೆ ಮಟ್ಟ ಇದಕ್ಕಿಂತ ಮೇಲೆ ಇರದು’ ಎಂದು ಬಿಜೆಪಿ ಖಾರವಾಗಿ ಪ್ರತಿಕ್ರಿಯಿಸಿದೆ.