ದಿಂಗಾಲೇಶ್ವರ ಶ್ರೀ ವಿರುದ್ಧ BSY ಗರಂ
ಕಮಿಷನ್ ಆರೋಪ ಮಾಡಿದ ದಿಂಗಾಲೇಶ್ವರ ಶ್ರೀಗಳ ವಿರುದ್ಧ ಮಾಜಿ ಸಿಎಂ BSY ಕಿಡಿಕಾರಿದ್ದಾರೆ. ಇದೊಂದು ಬೇಜವಾಬ್ದಾರಿ ಹೇಳಿಕೆ. ಪೀಠಾಧಿಪತಿಯಾಗಿದ್ದುಕೊಂಡು ಈ ರೀತಿ ಹೇಳಿಕೆ ನೀಡೋದು ಸರಿಯಲ್ಲ. ಮಠಾಧಿಪತಿಯಾಗಿದ್ದುಕೊಂಡು ಈ ರೀತಿ ಹೇಳಿಕೆ ಶೋಭೆ ತರುವಂತದ್ದಲ್ಲ ಎಂದು ಸಿಎಂ ಹೇಳಿದ್ದಾರೆ. ಯಾರು ಕಮಿಷನ್ ಕೇಳಿದ್ದಾರೆ. ಯಾರು ಕೊಟ್ಟಿದ್ದಾರೆ ಹೇಳಲಿ, ಈ ಬಗ್ಗೆ ತನಿಖೆ ನಡೆಸಲಾಗುತ್ತೆ ಎಂದರು. ಇನ್ನು ರಾಜ್ಯ ಕಾರ್ಯಕಾರಿಣಿಯಲ್ಲಾದ ಚರ್ಚೆಗಳ ಬಗ್ಗೆ ಮಾತನಾಡಿ ವಿಜಯನಗರದಲ್ಲಿ ಜೆಪಿ ನಡ್ಡಾ ಸಮ್ಮುಖದಲ್ಲಿ ಎರಡು ದಿನ ಪ್ರಮುಖರ ಸಮಾಲೋಚನೆ ನಡೆಸಲಾಗಿದೆ. 150 ಕ್ಷೇತ್ರ ಗೆಲ್ಲುವ ಗುರಿ ಹೊಂದಿದ್ದೇವೆ.. ಇದೇ ಮೊದಲು ಒಂದು ವರ್ಷ ಮುಂಚೆಯೇ ಕೆಲಸ ಪ್ರಾರಂಭ ಮಾಡಿದ್ದೇವೆ. ನೂರಕ್ಕೆ ನೂರು 150 ಸೀಟು ಗೆಲ್ಲುತ್ತೇವೆ. ಇಡೀ ದೇಶದಲ್ಲಿ ಕಾಂಗ್ರೆಸ್ ನೆಲಕಚ್ಚಿದೆ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿದೆ ಎಂದ್ರು.