ಬಿಎಸ್ ವೈ ಹುಟ್ಟೂರಿನ ಜನರು ಮಾಡಿದ್ರು ಇಂಥ ಕೆಲಸ

ಮಂಗಳವಾರ, 10 ಸೆಪ್ಟಂಬರ್ 2019 (17:17 IST)
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹುಟ್ಟಿರೋ ಬೂಕನಕೆರೆ ಹೋಬಳಿ ಜನ ಇಂಥ ಕೆಲಸ ಮಾಡಿ ಮಾದರಿಯಾಗಿದ್ದಾರೆ.

ಮಂಡ್ಯ ಬೂಕನಕೆರೆ ಹೋಬಳಿಯ ಮಡುವಿನಕೋಡಿ, ಹೊಸಕೋಟೆ, ಮದ್ದಿ ಕ್ಯಾಚಮನಹಳ್ಳಿ
ಗ್ರಾಮಸ್ಥರು ಹಾಗೂ ಮಡುವಿನಕೋಡಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಮಾದರಿ ಕೆಲಸ ಮಾಡಿದ್ದಾರೆ.

ಸಹಕಾರ ಸಂಘದ ಆಡಳಿತ ಮಂಡಳಿಯವರು ಹಾಗೂ ಗ್ರಾಮಸ್ಥರು ಎಲ್ಲರೂ ಒಟ್ಟುಗೂಡಿ ಕೊಡಗು ಸಂತ್ರಸ್ತರಿಗೆ 33 ಅಕ್ಕಿ ಮೂಟೆ, 50 ಕೆ.ಜಿ. ಬೇಳೆ, ತೆಂಗಿನಕಾಯಿಗಳು ಹಾಗೂ ಪರಿಹಾರ ಹಣವನ್ನು ನೀಡಿದ್ದಾರೆ.

ಸಿಎಂ ಬಿ.ಎಸ್.ಯಡಿಯೂರಪ್ಪನವರ ತವರು ಹೋಬಳಿ ಜನರು ಮಾಡಿರೋ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ