ಎಸ್.ಆರ್.ಹಿರೇಮಠ್ ಕೈ ಜೋಡಿಸಿದ್ದು ಯಾರಿಗೆ?

ಮಂಗಳವಾರ, 10 ಸೆಪ್ಟಂಬರ್ 2019 (17:01 IST)
ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್ ಈ ಹೋರಾಟಕ್ಕೆ ಕೈ ಜೋಡಿಸಿದ್ದಾರೆ.

ಬೆಂಗಳೂರಿನಲ್ಲಿ ಭೂಗಳ್ಳರ ಹಾವಳಿಯಿಂದ ಅದೆಷ್ಟೋ ಕೆರೆಗಳು ಮಾಯವಾಗಿವೆ. ಖ್ಯಾತ ಬಿಲ್ಡರ್ ಸಂಸ್ಥೆಯೊಂದು  ಕೆರೆಗೆ ನೀರು ಹರಿಯದಂತೆ ಮಾಡಿ ಕೆರೆಯ ಜಾಗವನ್ನು ಕಬಳಿಸಿದ್ದಾರೆ ಎಂದು ಗ್ರಾಮಸ್ಥರು  ಆರೋಪಿಸಿದ್ದಾರೆ. ಕಾಮಗಾರಿ ನಡೆಯುವ ಸ್ಥಳದಲ್ಲಿ ಪ್ರತಿಭಟನೆ ನಡೆಸಿದ್ದು, ಈ ಪ್ರತಿಭಟನೆಗೆ ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್ ಬೆಂಬಲ ಸೂಚಿಸಿದ್ದಾರೆ.

ವಾಯ್ಸ್ ಆಫ್ ಸರ್ಜಾಪುರ ಸಂಘಟನೆಯ ಸದಸ್ಯರು ಹಾಗೂ ಸರ್ಜಾಪುರ ಗ್ರಾಮಸ್ಥರು ಸರ್ಜಾಪುರದ ದೊಡ್ಡಕೆರೆ ಉಳಿಸುವ ಸಲುವಾಗಿ ಸ್ಥಳೀಯರು ಹಾಗೂ ಪರಿಸರ ಹೋರಾಟಗಾರು ಸೇರಿ ಈ ಸಂಘಟನೆ ಮಾಡಿಕೊಂಡಿದ್ದು ದೊಡ್ಡಕೆರೆಗೆ ಬರುವ ಮಳೆ ನೀರಿನ ಮೂಲ ರಾಜಕಾಲುವೆಯನ್ನು ಹಾಗೂ ಕೆರೆಯ ಒಂದಷ್ಟು ಜಾಗ ಸರ್ಕಾರಿ ಜಮೀನನ್ನು ಕಬಳಿಸಿದ್ದಾರೆ.

ಪ್ರೆಸ್ಟ್ರಿಜ್ ಎಂಬ ಬಿಲ್ಡರ್ ಸಂಸ್ಥೆ ಆನೇಕಲ್ ತಾಲೂಕಿನ ಯಮರೆ ಗ್ರಾಮದ ಬಳಿ ಸುಮಾರು 180 ಎಕರೆ ಜಾಗದಲ್ಲಿ ಅಪಾರ್ಟ್ಮೆಂಟ್ ನಿರ್ಮಿಸಲು ಮುಂದಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ರು. ಇನ್ನು ಈ ಪ್ರತಿಭಟನೆಗೆ ಪರಿವರ್ತನಾ ಸಂಸ್ಥೆಯ ಎಸ್.ಆರ್.ಹಿರೇಮಠ್ ಹಾಗೂ ಸಾಮಾಜಿಕ ಹೋರಾಟಗಾರ ರವಿಕೃಷ್ಣಾ ರೆಡ್ಡಿ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಇನ್ನು ಈ ಅವ್ಯವಹಾರದಲ್ಲಿ ಯಮರೆ ಪಂಚಾಯಿತಿ ಅಧಿಕಾರಿಗಳು ಶಾಮೀಲಾಗಿದ್ದು ಸರ್ಕಾರಿ ಜಾಗದ ಜೊತೆ ಸೇರಿಸಿ ಪ್ರೆಸ್ಟ್ರಿಜ್ ಬಿಲ್ಡರ್ಸ್'ಗೆ ಹುಂಡಿ ಖಾತೆ ಮಾಡಿಕೊಡಲಾಗಿದೆ ಎಂದು  ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ