ಎಕ್ಸಿಟ್ ಪೋಲ್ ಸಮೀಕ್ಷೆಯಿಂದ ಕೈ ಪಡೆಗೆ ಹತಾಶೆ ಎಂದ BSY

ಸೋಮವಾರ, 20 ಮೇ 2019 (13:40 IST)
ರಾಷ್ಟ್ರದ ಬಹುತೇಕ ಎಲ್ಲ ಸಮೀಕ್ಷಗಳಲ್ಲೂ ಬಿಜೆಪಿ - ಎನ್ ಡಿ ಎಗೆ ಬಹುಮತ ಬರುತ್ತದೆ ಎಂದೇ ಬಂದಿದೆ. ರಾಜ್ಯದಲ್ಲೂ ನಾವು 22-23 ಸ್ಥಾನಗಳನ್ನು ನಿರೀಕ್ಷಿಸಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹೇಳಿದ್ದಾರೆ.

ಮೇ 23 ರ ನಂತರ ರಾಜ್ಯ ಮತ್ತು ರಾಷ್ಟ್ರದಲ್ಲಿ ರಾಜಕೀಯ ಚಿತ್ರಣ ಬದಲಾಗುತ್ತದೆ. ಈ ಸಮೀಕ್ಷೆಗಳನ್ನು ನೋಡಿ ಕಾಂಗ್ರೆಸ್ ಪ್ರಮುಖರು ಹತಾಶರಾಗಿ ಮನಬಂದಂತೆ ಹೇಳುತ್ತಿದ್ದಾರೆ ಎಂದು ಬಿ.ಎಸ್.ಯಡಿಯೂರಪ್ಪ ಟೀಕೆ ಮಾಡಿದ್ದಾರೆ.

ರಾಜ್ಯದಲ್ಲಿ ತೀವ್ರ ಬರ ಇದೆ. ಧರ್ಮಸ್ಥಳದಲ್ಲೂ ಇದೇ ಮೊದಲ ಬಾರಿ ಜಲಕ್ಷಾಮ ಕಾಣಿಸಿಕೊಂಡಿದೆ. ಭಕ್ತಾದಿಗಳು ಪ್ರವಾಸ ಮುಂದೂಡಿ ಎಂದು ಧರ್ಮಾಧಿಕಾರಿಗಳೇ ಮನವಿ ಮಾಡಿಕೊಂಡಿದ್ದಾರೆ. ಇನ್ನು ಎರಡು ಮೂರು ವಾರದಲ್ಲಿ ಮಳೆಯಾಗದೇ ಇದ್ದರೆ ಪರಿಸ್ಥಿತಿ ತೀವ್ರವಾಗುತ್ತದೆ. ಈ ಹಂತದಲ್ಲಿ ಸರ್ಕಾರ ತಕ್ಷಣ ಮಧ್ಯ ಪ್ರವೇಶಿಸಬೇಕು. ಇದೇ ಕಾರಣಕ್ಕೆ ಬಿಜೆಪಿ ಕಚೇರಿಯಲ್ಲಿ ಪೂಜೆ ಹೋಮ ಏರ್ಪಡಿಸಿದ್ದಾರೆ ಎಂದರು.

ಎಕ್ಸಿಟ್ ಪೋಲ್ ಸಮೀಕ್ಷೆ ಬಿಜೆಪಿ ಅಧ್ಯಕ್ಷರ ಸಮೀಕ್ಷೆ ಎಂಬ ಪರಮೇಶ್ವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿ.ಎಸ್.ಯಡಿಯೂರಪ್ಪ, ಎಕ್ಸಿಟ್ ಪೋಲ್ ಸಮೀಕ್ಷೆ ಏನಾದ್ರು ರಾಜಕೀಯ ನಾಯಕರು ನಡೆಸೋಕೆ ಬರುತ್ತಾ? ಪರಮೇಶ್ವರ ಹೇಳಿಕೆಯಲ್ಲಿ ಹತಾಶೆ ಭಾವನೆ ಇದೆ. ಕಾಂಗ್ರೆಸ್ ನಾಯಕರು ಹತಾಶರಾಗಿ ಈ ರೀತಿಯ ಹೇಳಿಕೆ ಕೊಡ್ತಿದ್ದಾರೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ