ಚಲಿಸುತ್ತಿದ್ದ ಆಂಬುಲೆನ್ಸ್ ಗೆ ಬಂಕಿ; ಒಳಗಿದ್ದ ರೋಗಿಗೆ ಏನಾಯ್ತು?
ಚಲಿಸುತ್ತಿದ್ದ 108 ಆಂಬುಲೆನ್ಸ್ ಬೆಂಕಿಗಾಹುತಿಯಾದ ಘಟನೆ ನಡೆದಿದೆ.
ಆಂಬುಲೆನ್ಸ್ ನಲ್ಲಿದ್ದ ರೋಗಿ ಹಾಗೂ ಸಂಬಂಧಿಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿವೆ. ಕೂಡಲೇ ಬೇರೊಂದು ವಾಹನದಲ್ಲಿ ರೋಗಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು.
ರೋಗಿಯನ್ನು ಆಸ್ಪತ್ರೆಗೆ ಕೊಂಡೊಯ್ಯುವಾಗ ನಡೆದ ಘಟನೆ ಇದಾಗಿದೆ. ಘಟನೆಯಲ್ಲಿ ರೋಗಿ ಹಾಗೂ ಆಂಬುಲೆನ್ಸ್ ಚಾಲಕ ವೈದ್ಯಕೀಯ ಸಿಬ್ಬಂದಿ ಪಾರಾಗಿದ್ದಾರೆ.
ಕರ್ನಾಟಕದ ಗಡಿ ಆನೇಕಲ್ ಗೆ ಹೊಂದಿಕೊಂಡಿರೋ ತಮಿಳುನಾಡಿನ ಅಡುವೈ ಕುರುಚಿ ಗ್ರಾಮದಲ್ಲಿ ಘಟನೆ ನಡೆದಿದೆ.
ಹೋಗನೇಕಲ್ ರಸ್ತೆಯಲ್ಲಿರುವ ಅಡುವೈ ಕುರುಚಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು.