ಲಾಕ್ ಡೌನ್ ನಡುವೆ ಈ ಜಿಲ್ಲೆಯಿಂದ ಬಸ್ ಸಂಚಾರ ಆರಂಭ

ಮಂಗಳವಾರ, 19 ಮೇ 2020 (19:24 IST)
ನಾಲ್ಕನೇ ಹಂತದ ಲಾಕ್ ಡೌನ್ ನಡುವೆ ಈ ಜಿಲ್ಲೆಯಿಂದಲೂ ಬಸ್ ಸಂಚಾರ ಆರಂಭಗೊಂಡಿದೆ.

ಕೆಲವು ಮುನ್ನೆಚ್ಚರಿಕಾ ಕ್ರಮಗಳ ನಡುವೆ ಉತ್ತರಕನ್ನಡ ಜಿಲ್ಲೆಯಲ್ಲಿಯೂ  ಬಸ್ ಸಂಚಾರ ಆರಂಭವಾಗಿದೆ.  

ಸುಮಾರು 58 ದಿನಗಳ ನಂತರ ಬಸ್ ಸಂಚಾರ ಪುನರಾರಂಭವಾದ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು ಮೊದಲ ಬಸ್ ತೆರಳುವ ಮುನ್ನ ಚಪ್ಪಾಳೆ ತಟ್ಟಿ ಶುಭ ಹಾರೈಸಿದರು.

ಕಾರವಾರದಿಂದ ಹುಬ್ಬಳ್ಳಿಗೆ ಬೆಳಗ್ಗೆ 9 ಗಂಟೆಗೆ ಮೊದಲ ಬಸ್ ಸಂಚಾರ ಆರಂಭಿಸಿತು. ಬಸ್ ಪ್ರಯಾಣ ಆರಂಭಿಸುವ ಮುನ್ನ ಪ್ರತಿಯೊಬ್ಬ ಪ್ರಯಾಣಿಕರ ಮಾಹಿತಿಯನ್ನು ಪಡೆದುಕೊಂಡು ಅವರ ದೇಹದ ತಾಪಮಾನವನ್ನು ಥರ್ಮಲ್ ಸ್ಕ್ರೀನರ್ ಮೂಲಕ ಪರಿಶೀಲಿಸಲಾಯಿತು. ಅಲ್ಲದೇ ಪ್ರತಿ ಬಸ್‌ನಲ್ಲಿ 30 ಮಂದಿ ಪ್ರಯಾಣಿಕರಿಗಷ್ಟೇ ಅವಕಾಶ ನೀಡಲಾಯಿತು.

ಬಸ್ ಸಂಚಾರದ ಹಿನ್ನೆಲೆಯಲ್ಲಿ ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಹುಬ್ಬಳ್ಳಿಗೆ ತೆರಳಲು ಸುಮಾರು 100ಕ್ಕೂ ಹೆಚ್ಚು ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ