ಕೋರ್ಟ್ ಗೆ ಸೆಡ್ಡುವಡಿದು ಗೊಂದಲ ಸೃಷ್ಟಿಸಿ ಪಾಲಿಕೆ ಎಲೆಕ್ಷನ್ ನಡೆಯದಂತೆ ತಂತ್ರ ರುಪಿಸ್ತಿದ್ಯಾ...!

ಗುರುವಾರ, 1 ಡಿಸೆಂಬರ್ 2022 (20:13 IST)
ಬಿಬಿಎಂಪಿ ಚುನಾಹಿತ ಅಧಿಕಾರಿಗಳಿಲ್ಲದೆ ಎರಡೂ ವರ್ಷಕ್ಕಿಂತಲೂ ಹೆಚ್ಚಿನ ಅವಧಿ ಕಳೆದೂಗಿವೆ. ಕೋರ್ಟ್ ಆದೇಶದಂತೆ ಡಿಸೆಂಬರ್ 31 ರೊಳಗೆ ಬಿಬಿಎಂಪಿ ಚುನಾವಣೆ ನಡೆಯುತ್ತೆ, ಎಂಭ ಕನಸು ಕಾಣ್ತಿರುವ, ರಾಜಕೀಯ ಚುನಾಯಿತ ನಾಯಕರಿಗೆ ಸರ್ಕಾರ ಶಾಕ್ ನೀಡಿದೆ.
 
ಬಿಬಿಎಂಪಿ ಒಂದಲ್ಲ ಒಂದು ಕಡೆಯಿಂದ ಸದ್ದು ಮಾಡ್ತಿದ್ದೆ, ಬಿಬಿಎಂಪಿ ಚಲುಮೆಯ ಅಕ್ರಮದ ಸದ್ದು ಹಳಿಸುವವ ಮುನ್ನವೇ ಎಲೆಕ್ಷನ್ ವಿಚಾರವನ್ನು ಇಟ್ಟುಕೊಂಡು ಕೋರ್ಟ್ ಮೆಟ್ಟೆಲೇರಿದ ಸರ್ಕಾರ,ಪಾಲಿಕೆ ಎಲೆಕ್ಷನ್ ವಿಚಾರ ಸುಪ್ರೀಂ ಕೋರ್ಟ್ ನಿಂದ ಹಿಡಿದು, ಹೈಕೋರ್ಟ್ ವರೆಗೂ ಸುತ್ತಿದ್ದರು ಸದ್ಯಕ್ಕೆ ಪಾಲಿಕೆ ಎಲೆಕ್ಷನ್ ಸಮಯದ ನಿಗದಿ ಮಾತ್ರ ನಿಗೂಡವಾಗಿ ಉಳಿದಿದೆ. ಸದ್ಯ ಪಕ್ಷಾತೀತವಾಗಿ ಶಾಸಕರು ಬಿಬಿಎಂಪಿ ಚುನಾವಣೆಗೆ ಅಡ್ಡಗಾಲು ಹಾಕುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. 
 
2020 ಸೆಪ್ಟೆಂಬರ್ ನಲ್ಲಿ  ಚುನಾಯಿತ ಪ್ರತಿನಿಧಿಗಳ ಅವಧಿ ಪೂರ್ಣಗೊಂಡ ನಂತರ ಬಿಬಿಎಂಪಿಯು 198 ವಾರ್ಡ್ಗಳನ್ನು ಜನಸಂಖ್ಯೆ ಆಧಾರದಲ್ಲಿ 243 ವಾರ್ಡ್ಗಗಳನ್ನಾಗಿ ರಾಜ್ಯ ಸರ್ಕಾರ  ವಿಂಗಡಿಸಿತ್ತು,ಇದಾದ ನಂತರ ವಾರ್ಡ್ ಮೀಸಲಾತಿ ನಿಗದಿಯಲ್ಲಿ ಸಾಕಷ್ಟು ಗೊಂದಲಗಳನ್ನುಂಟು ಮಾಡಿ,ಚುನಾವಣೆ ನಡೆಯದಂತೆ ಸರ್ಕಾರ ಬ್ರೇಕ್ ಹಾಕಿತ್ತು.ಇದರ ಬೆನ್ನಲ್ಲೇ ಹೈಕೋರ್ಟ್ ಮಧ್ಯೆ ಪ್ರವೇಶಿಸಿ ನವೆಂಬರ್ 30 ರೊಳಗೆ ವಾರ್ಡ್ ಮೀಸಲಾತಿ ನಿಗದಿ ಮಾಡಿ, ಚುನಾವಣಾ ಆಯೋಗಕ್ಕೆ ಸಲ್ಲಿಸಿ.ನಂತರ  ಡಿಸೆಂಬರ್ 31ರೊಳಗೆ ಪಾಲಿಕೆ ಚುನಾವಣೆ ನಡೆಸಲು ಸರ್ಕಾರಕ್ಕೆ ಹೈಕೋರ್ಟ್ ಚಾಟಿ ಬಿಸಿತ್ತು, ಇದರ ಬೆನ್ನಲ್ಲೇ ಎರಡು ತಿಂಗಳ  ಕಲಾಹರಣ ಮಾಡಿದ ಸರ್ಕಾರ ಮತ್ತೆ ಎಲೆಕ್ಷನ್ ತಡೆಯಲು ಕೋರ್ಟ್ ಮೆಟ್ಟಿಲೇರಿದೆ. 
 
 ಹೈಕೋರ್ಟ್ ಸೂಚನೆಯಂತೆ ಇದೇ ತಿಂಗಳ   ಕೊನೆಯಲ್ಲಿ ಪಾಲಿಕೆ ಎಲೆಕ್ಷನ್ ನಡೆಯಬೇಕಿತ್ತು, ಆದರೆ ಸರ್ಕಾರ ಒಂದಲ್ಲಾ ಒಂದು ನೆಪ ಹೇಳುತ್ತಾ ಚುನಾವಣೆ ಮುಂದೂಡುವ ಕಸರತ್ತು ನಡೆಸುತ್ತಿದ್ದೆ. ಸರ್ಕಾರ ನಿನ್ನೆ ಕೋರ್ಟ್ ಮೆಟೆಲ್ಲೇರಿ ಹೈಕೋರ್ಟ್ ಆದೇಶ ನೀಡಿರುವ ಪಾಲನೆಗೆ 3 ತಿಂಗಳ ಕಾಲಾವಕಾಶ ಕೋರಿ ಸರ್ಕಾರ ಸಲ್ಲಿಸಿರುವ ಪ್ರಮಾಣಪತ್ರ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ