ರಷ್ಯಾ ಉಕ್ರೇನ್ ಯುದ್ಧವಾದರೂ ನಿಲ್ಲಬಹುದು ಕಾಂಗ್ರೆಸ್ ಜಗಳ ನಿಲ್ಲಲ್ಲ: ವಿಜಯೇಂದ್ರ ಟಾಂಗ್

Krishnaveni K

ಗುರುವಾರ, 31 ಜುಲೈ 2025 (11:01 IST)

ಬೆಂಗಳೂರು: ರಷ್ಯಾ ಉಕ್ರೇನ್ ಯುದ್ಧವಾದರೂ ನಿಲ್ಲಬಹುದು. ಆದರೆ ಕಾಂಗ್ರೆಸ್ ನ ಒಳಜಗಳ ಮಾತ್ರ ನಿಲ್ಲಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಟಾಂಗ್ ಕೊಟ್ಟಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಬಿಟ್ಟು ಸಿಎಂ ಸಿದ್ದರಾಮಯ್ಯ ಏಕಾಂಗಿಯಾಗಿ ಶಾಸಕರ ಜೊತೆ ಜಿಲ್ಲಾವಾರು ಸಭೆ ನಡೆಸಿದ್ದರು. ಇದರಿಂದ ಡಿಕೆ ಶಿವಕುಮಾರ್ ಒಳಗೊಳಗೇ ಅಸಮಾಧಾನ ತೋಡಿಕೊಂಡಿದ್ದಾರೆ ಎಂದು ಸುದ್ದಿಯಾಗಿತ್ತು.

ಕಾಂಗ್ರೆಸ್ ನಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಸಿಎಂ ಕುರ್ಚಿಗಾಗಿ ಶೀತಲಸಮರ ನಡೆಯುತ್ತಿರುವಾಗಲೇ ಇಂತಹದ್ದೊಂದು ಸಭೆ ಎಲ್ಲರೂ ಹುಬ್ಬೇರುವಂತೆ ಮಾಡಿತ್ತು. ಕೊನೆಗೆ ಡಿಕೆ ಶಿವಕುಮಾರ್ ಅವರೇ ನನಗೆ ಸಿಎಂ ಸಭೆ ನಡೆಸಿರುವುದಕ್ಕೆ ಆಕ್ಷೇಪ ಇಲ್ಲ ಎಂದು ಹೇಳಿಕೆ ನೀಡಿ ವಿವಾದಕ್ಕೆ ವಿರಾಮ ನೀಡಿದ್ದರು.

ಇದೀಗ ಇದೇ ವಿಚಾರವಾಗಿ ವಿಜಯೇಂದ್ರ ವ್ಯಂಗ್ಯ ಮಾಡಿದ್ದಾರೆ. ಸೆಪ್ಟೆಂಬರ್‌ ಕ್ರಾಂತಿಯಿಂದಾಗಿ ಮುಖ್ಯಮಂತ್ರಿಗಳು ವಿಚಲಿತರಾಗಿ ಮತ್ತೆ ಶಾಸಕರ ಸಭೆ ಕರೆದಿದ್ದಾರೆ. ಶಾಸಕರಿಗೆ ಅನುದಾನ ಬಿಡುಗಡೆ ಮಾಡಿದ್ದಾರೆ ಎನ್ನುವುದು ಸುಳ್ಳು. ರಷ್ಯಾ ಉಕ್ರೇನ್‌ ಯುದ್ಧವಾದರೂ ನಿಲ್ಲಬಹುದು ಕಾಂಗ್ರೆಸ್‌ ಒಳಗಿನ ಕಲಹ ನಿಲ್ಲುವುದಿಲ್ಲ ಎಂದಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ