ಸಿದ್ದರಾಮಯ್ಯಗೆ C.C.ಪಾಟೀಲ್​​ ವ್ಯಂಗ್ಯ

ಶನಿವಾರ, 17 ಸೆಪ್ಟಂಬರ್ 2022 (16:47 IST)
2006 ರಿಂದ ಎಲ್ಲಿವರೆಗೆ ನಡೆದ ಸರ್ಕಾರಗಳ ಹಗರಣ ತನಿಖೆ ಮಾಡುವಂತೆ ಮಾಜಿ ಸಿಎಂ ಸಿದ್ದು ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಸಿ.ಸಿ.ಪಾಟೀಲ್​​​, ಹಾವು ಅವರ ಬುಟ್ಟಿಯಲ್ಲೂ, ನಮ್ಮ ಬುಟ್ಟಿಯಲ್ಲೂ ಇದ್ದಾವೆ.  ಅವರು ಎಂತಹ ಹಾವು ಬಿಟ್ರೂ, ನಾವು ಅದಕ್ಕಿಂತ ಚೆನ್ನಾಗಿರೋ ಹಾವು ಬಿಡ್ತೀವಿ ಎಂದು ಲೇವಡಿ ಮಾಡಿದ್ರು. ವಿಧಾನಸಭಾ ಅಧಿವೇಶನದಲ್ಲಿ ಭಾಗಿಯಾಗಿದ್ದೆ. ಶನಿವಾರ ಮತ್ತು ಭಾನುವಾರ ಅಧಿವೇಶನಕ್ಕೆ ರಜೆ ಇರುವ ಕಾರಣ ಉಸ್ತುವಾರಿ ಜಿಲ್ಲೆ ಬಾಗಲಕೋಟೆಗೆ ಬಂದಿದ್ದೇನೆ. ಮಳೆ ಹಾನಿ, ಪ್ರವಾಹ ಹಾನಿ ಪ್ರದೇಶದ, ಪರಿಹಾರದ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸ್ತೇನೆ ಎಂದು ತಿಳಿಸಿದ್ರು. ಇಂದು ಮಳೆ ಮತ್ತು ಪ್ರವಾಹ ಹಾನಿ ಪ್ರದೇಶಕ್ಕೆ C.C.ಪಾಟೀಲ್​​​ ಭೇಟಿ ನೀಡಲಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ