8 ವರ್ಷದ ಬಳಿಕ ಪತಿ ಬಗ್ಗೆ ಅಸಲಿ ಸತ್ಯ ತಿಳಿದ ಪತ್ನಿ ಶಾಕ್
2014 ರಲ್ಲಿ ದಂಪತಿ ಮದುವೆಯಾಗಿದ್ದರು. ಆದರೆ ಇದೀಗ ಪತ್ನಿಗೆ ತನ್ನ ಪತಿ ಈ ಮೊದಲು ಒಬ್ಬ ಹೆಣ್ಣಾಗಿದ್ದಳು ಎಂಬ ಸತ್ಯ ತಿಳಿದುಬಂದಿದೆ. ಲಿಂಗ ಪರಿವರ್ತನೆ ಆಪರೇಷನ್ ಮಾಡಿಸಿಕೊಂಡಿದ್ದ ಪತಿಯ ನಿಜ ರೂಪ ತಿಳಿದ ಪತ್ನಿ ಈಗ ಪೊಲೀಸರಿಗೆ ದೂರು ನೀಡಿದ್ದಾಳೆ.
ತನ್ನ ಪತಿ ತನ್ನಿಂದ ಈ ವಿಚಾರ ಮುಚ್ಚಿಟ್ಟು ಮೋಸ ಮಾಡಿದ್ದಾನೆ ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾಳೆ. ಪೊಲೀಸರು ಈಗ ಪ್ರಕರಣ ದಾಖಲಿಸಿಕೊಂಡಿದ್ದಾರೆ.