ಮೊರ್ಬಿ ದುರಂತಕ್ಕೆ C.T ರವಿ ಸಂತಾಪ

ಮಂಗಳವಾರ, 1 ನವೆಂಬರ್ 2022 (16:07 IST)
ಗುಜರಾತ್ ಮಚ್ಛು ನದಿಗೆ ಅಡ್ಡಲಾಗಿ ಕಟ್ಟಿದ್ದ ಮೊರ್ಬಿ ಸೇತುವೆಯು ಪುಡಂರ ಕುಚೇಷ್ಟೆಗೆ ಮುರಿದು ಬಿದ್ದು, ನೂರಾರು ಮಂದಿ ಪ್ರಾಣ ಕಳೆದುಕೊಂಡರು. ಈ ಸೇತುವೆ ದುರಂತಕ್ಕೆ BJP ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ  ಸಿ.ಟಿ ರವಿ ಸಂತಾಪ ಸೂಚಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು ಸೇತುವೆ ದುರಂತಕ್ಕೆ ತಾಂತ್ರಿಕ ಕಾರಣ ಮಾತ್ರವಲ್ಲ, ಸೇತುವೆ ಜವಾಬ್ದಾರಿ ಹೊತ್ತವರು ಕೂಡ ಕಾರಣ. ಸೇತುವೆ ಸಾಮರ್ಥ್ಯ 100 ಜನರು ಇರಬೇಕಾದ್ರೆ,  500 ಜನರನ್ನು ಸೇತುವೆ ಮೇಲ್ಬಾಗದಲ್ಲಿ ಬಿಟ್ಟಿರುವುದೇ ದುರಂತಕ್ಕೆ ಕಾರಣ. ಇದು ಸೇತುವೆ ಜವಾಬ್ದಾರಿ ಹೊತ್ತವರ ದಿವ್ಯ ನಿರ್ಲಕ್ಷ್ಯ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು, ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮವಾಗಬೇಕು ಎಂದು ಸಿ.ಟಿ ರವಿ ಹೇಳಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ