ಶಾಸಕ ಸತೀಶ್ ರೆಡ್ಡಿ ಭಾಮೈದನ ಗೂಂಡಾಗಿರಿ; ಆತ ನನ್ನ ಬಾಮೈದನೇ ಅಲ್ಲ ಎಂದ ಕೈ ಶಾಸಕ!
ಮಿಥುನ್ ರೆಡ್ಡಿ ಎಂಬಾತ ತಿಪ್ಪೇಸ್ವಾಮಿ ಎಂಬ ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾನೆ. ಓವರ್ ಟೇಕ್ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿದ ಮಿಥುನ್ ರೆಡ್ಡಿ ತಾನು ಶಾಸಕ ಸತೀಶ್ ರೆಡ್ಡಿ ಭಾಮೈದ ಎಂದು ಈ ವೇಳೆ ಧಮಕಿ ಹಾಕಿದ್ದ ಎನ್ನಲಾಗಿದೆ. ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಆದರೆ ಈ ಬಗ್ಗೆ ಖಾಸಗಿ ವಾಹಿನಿಗೆ ಹೇಳಿಕೆ ನೀಡಿರುವ ಸತೀಶ್ ರೆಡ್ಡಿ ಆತ ತನ್ನ ಭಾಮೈದ ಅಲ್ಲ. ಯಾರೋ ಕಿಡಿಗೇಡಿಗಳು ನನ್ನ ಹೆಸರು ದುರುಪಯೋಗಪಡಿಸಿದ್ದಾರೆ ಎಂದಿದ್ದಾರೆ. ಇದೀಗ ಕೋರಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.