Dharmasthala: ಪೊಲೀಸರ ಮುಂದೆ ಗೋಗೆರೆದ ಚಿನ್ನಯ್ಯ ಹೇಳಿದ್ದೇನು
ಧರ್ಮಸ್ಥಳದಲ್ಲಿ ಬುರುಡೆ ಗ್ಯಾಂಗ್ ನ ಒಂದೊಂದೇ ಕಹಾನಿಗಳು ಈಗ ಹೊರಗೆ ಬರುತ್ತಿವೆ. ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿಯೇ ಚಿನ್ನಯ್ಯ ವಾಸ್ತವ್ಯ ಹೂಡಿದ್ದ ಎಂದು ತಿಳಿದುಬಂದಿದೆ. ಇದೀಗ ಪೊಲೀಸರ ಮುಂದೆ ಸಾವಿರಾರು ಹೆಣ ಹೂತಿದ್ದೆ ಎಂದಿದ್ದೆಲ್ಲಾ ಸುಳ್ಳು. ಈ ಪ್ರಕರಣ ಇಷ್ಟು ದೊಡ್ಡದಾಗುತ್ತದೆ ಎಂದು ಗೊತ್ತಿರಲಿಲ್ಲ.
ನಾನು ತಂದು ಕೊಟ್ಟ ಬುರುಡೆ ಎಲ್ಲಿಯದ್ದು ಎಂದು ನನಗೆ ಗೊತ್ತಿಲ್ಲ. ಆ ಗುಂಪು ನನಗೆ ತಂದುಕೊಟ್ಟಿದ್ದನ್ನು ಕೊಟ್ಟಿದ್ದೆ. ದುಡ್ಡಿನ ಆಸೆಗೆ ಎಲ್ಲಾ ಮಾಡಿದೆ. ಅಲ್ಲಿ ಶವ ಸಿಗಲ್ಲ ಎಂದು ನನಗೆ ಗೊತ್ತಿತ್ತು. ಶೋಧ ಕಾರ್ಯ ಮುಗಿಸಿ ಹೋದ ನಂತರ ಗ್ಯಾಂಗ್ ನನಗೆ ಬೆದರಿಕೆ ಹಾಕಿತ್ತು. ಈಗ ನೀನು ಹಿಂದೆ ಸರಿದರೆ ಎದುರಾಳಿಗಳು ನಿನ್ನನ್ನು ಸುಮ್ಮನೆ ಬಿಡಲ್ಲ ಎಂದು ಬೆದರಿಸಿದ್ದರು. ನಾನು ಹೂತ ಹೆಣಗಳೆಲ್ಲವೂ ಮಹಜರು ಆದ ಶವಗಳೇ. ಸಾವಿರಾರು ಶವ ಹೂತಿಲ್ಲ. ಆದರೆ ಆ ಗ್ಯಾಂಗ್ ನನ್ನ ಬಳಿ ಹಾಗೆ ಹೇಳಲು ಬಲವಂತ ಮಾಡಿತ್ತು. ದಯವಿಟ್ಟು ನನ್ನನ್ನು ಪ್ರಕರಣದಿಂದ ಪಾರು ಮಾಡಿ, ನ್ಯಾಯಾಧೀಶರ ಮುಂದೆ ಎಲ್ಲವನ್ನೂ ಹೇಳುತ್ತೇನೆ ಎಂದು ಚಿನ್ನಯ್ಯ ಗೋಗೆರೆದಿದ್ದಾನೆ ಎಂದು ತಿಳಿದುಬಂದಿದೆ.