ರಾಜ್ಯದಲ್ಲಿ ಅನ್ನಭಾಗ್ಯಕ್ಕೆ ಆಹಾರ ಇಲಾಖೆಯಿಂದ ಹೊಸ ಪ್ರಯೋಗ

ಶುಕ್ರವಾರ, 8 ಸೆಪ್ಟಂಬರ್ 2023 (19:00 IST)
ಸಿದ್ದರಾಮಯ್ಯನವರ ಅನ್ನಭಾಗ್ಯ ಯೋಜನೆ ಬಗ್ಗೆ ಆಹಾರ ಇಲಾಖೆ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಅನ್ನಭಾಗ್ಯ ಮುಂದುವರಿಸುವ ಬಗ್ಗೆ ಸರ್ಕಾರದಿಂದ ಸರ್ವೇ ನಡೆಸಲು ತೀರ್ಮಾನಿಸಲಾಗಿದ್ದು, ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಅಕ್ಕಿಯನ್ನು ಕೊಡಬೇಕಾ? ಅಥವಾ ಬೇಡ್ವಾ ಎನ್ನುವ ಬಗ್ಗೆ ಸರ್ವೇ ನಡೆಸಲು ಸೂಚನೆ ನೀಡಲಾಗಿದೆ. 
 
ಸರ್ವೇಯಲ್ಲಿ ಪ್ರತಿ ಜಿಲ್ಲೆ ಹಾಗೂ ನಗರದ ನ್ಯಾಯಬೆಲೆ ಅಂಗಡಿಗಳಿಗೆ ಬರುವ ಜನರಿಂದ ಮಾಹಿತಿ ಕಲೆಹಾಕುತ್ತಿದ್ದು, ಅನ್ನಭಾಗ್ಯದ ಬಗ್ಗೆ ಜನರಿಗೆ ಒಲವು ಇದೆಯಾ ಅಥವಾ ಡಿಬಿಟಿ ಹಣದ ಬಗ್ಗೆ ಒಲವು ಇದೆಯಾ ಎನ್ನುವ ಬಗ್ಗೆ ಸರ್ವೇ ನಡೆಸಲಾಗುತ್ತಿದೆ. ಸರ್ವೇಯಲ್ಲಿ ಯಾವುದಕ್ಕೆ ಹೆಚ್ಚು ಜನರು ಒತ್ತು ನೀಡುತ್ತಾರೆ ಎನ್ನುವುದನ್ನ ನೋಡಿಕೊಂಡು ಯೋಜನೆ ಮುಂದುವರಿಸಬೇಕಾ ಅಥವಾ ನಿಲ್ಲಿಸುವ ಬಗ್ಗೆ ಸರ್ಕಾರದ ನಿರ್ಧರಿಸಲಿದೆ ಅಂತಾ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ