ಕೆಫೆ ಸ್ಫೋಟ ಪ್ರಕರಣವು ಮಂಗಳೂರು ಸ್ಫೋಟ ಪ್ರಕರಣದೊಂದಿಗೆ ಸಾಮ್ಯತೆ- ಡಿಕೆಶಿ

geetha

ಶನಿವಾರ, 2 ಮಾರ್ಚ್ 2024 (19:40 IST)
ಬೆಂಗಳೂರು : ಶನಿವಾರ  ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ  ಡಿಸಿಎಂ ಡಿ.ಕೆ. ಶಿವಕುಮಾರ್ತನಿಖೆ ನಿಷ್ಪಕ್ಷಪಾತವಾಗಿ ಸಾಗುತ್ತಿದ್ದು, ಬೆಂಗಳೂರಿನ ಜನತೆ ಆತಂಕ ಪಡುವ ಅವಶ್ಯಕತೆಯಿಲ್ಲ ಎಂದರು.ಕ್ರವಾರ ನಡೆದ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣವು ಮಂಗಳೂರು ಸ್ಫೋಟ ಪ್ರಕರಣದೊಂದಿಗೆ ಸಾಮ್ಯತೆ ಹೊಂದಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
 
ಆರೋಪಿಯ ಮುಖ ಚಹರೆ ಹಲವು ಸಿಸಿಟಿವಿ ಕೆಮೆರಾಗಳಲ್ಲಿ ಸ್ಪಷ್ಟವಾಗಿ ಗೋಚರವಾಗಿದೆ. ಮಂಗಳೂರು ಮತ್ತು ಶಿವಮೊಗ್ಗದ ಪೊಲೀಸ್ ಅಧಿಕಾರಿಗಳೂ ಸಹ ತನಿಖೆಗಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ ಎಂದು ನುಡಿದ ಡಿಕೆಶಿ, ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದರು.

 
ಬ್ರ್ಯಾಂಡ್ ಬೆಂಗಳೂರು ಬಾಂಬ್ ಬೆಂಗಳೂರು ಆಗುತ್ತಿದೆ ಎಂಬ ಬಿಜೆಪಿಯವರ ಟೀಕೆಗೆ ಪ್ರತಿಕ್ರಿಯಿಸಿದ ಅವರು , ಬಿಜೆಪಿ ಆಡಳಿತಾವಧಿಯಲ್ಲಿಯೂ ಇಂಥಾ ಪ್ರಕರಣಗಳು ನಡೆದಿತ್ತು. ಸಂಸತ್ ಭವನದ ಮೇಲೇ ದಾಳಿ ನಡೆಸಲಾಗಿತ್ತು. ಇಂಥಾ ವಿಷಯದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಬಿಜೆಪಿ ವಿರುದ್ದ ಹರಿಹಾಯ್ದರು.ಮಹಿಳೆಯೊಬ್ಬರನ್ನು ಹೊರತುಪಡಿಸಿ ಮಿಕ್ಕೆಲ್ಲಾ ಗಾಯಾಳುಗಳೂ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಚಿಕಿತ್ಸಾ ವೆಚ್ಚ ಭರಿಸಲು ಹಾಗೂ ಸೂಕ್ತ ಪರಿಹಾರ ನೀಡಲು ಆದೇಶಿಸಲಾಗಿದೆ ಎಂದು ನುಡಿದ ಡಿ.ಕೆ. ಶಿವಕುಮಾರ್, ಸಧ್ಯದ ಪರಿಸ್ಥಿತಿಯಲ್ಲಿ ಸ್ಫೋಟದ ಆರೋಪಿಯ ಬಗ್ಗೆ ಹೆಚ್ಚು ಮಾಹಿತಿ ನೀಡಲು ಸಾಧ್ಯವಿಲ್ಲ ಎಂದರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ