ಕರಗ ಮಹೋತ್ಸವಕ್ಕೆ ದಿನಗಣನೆ

ಶುಕ್ರವಾರ, 8 ಏಪ್ರಿಲ್ 2022 (17:14 IST)
ಇಂದಿನಿಂದ ಐತಿಹಾಸಿಕ ಕರಗ ಮಹೋತ್ಸವಕ್ಕೆ ಚಾಲನೆ ಸಿಕ್ಕಿದ್ದು, ನಾಳೆಯಿಂದ ಏಪ್ರಿಲ್ 12ರ ಮಂಗಳವಾರದವರೆಗೂ ದೇವಸ್ಥಾನದಲ್ಲಿ ದ್ರೌಪದಮ್ಮನಿಗೆ ವಿಶೇಷ ಪೂಜೆ ನಡೆಯುತ್ತದೆ. ಏಪ್ರಿಲ್ 13 ಬುಧವಾರ ದ್ವಾದಶಿಯಂದು - ರಾತ್ರಿ ಮೂರು ಗಂಟೆಗೆ  ದೀಪಾರತಿ, ಏಪ್ರಿಲ್ 14 ಗುರುವಾರ ತ್ರಯೋದಶಿಯಂದು ರಾತ್ರಿ ಮೂರು ಗಂಟೆಗೆ ಹಸಿ ಕರಗ, ಏಪ್ರಿಲ್ 15 ಶುಕ್ರವಾರ ಚತುರ್ದಶಿ ರಾತ್ರಿ ಮೂರು ಗಂಟೆಗೆ ಪುರಾಣ ಕಥನ - ಪೊಂಗಲ್ ಸೇವೆ, ಏಪ್ರಿಲ್ ‌16ರ ಶನಿವಾರ ಚೈತ್ರ ಪೊರ್ಣಿಮಾ ಹೂವಿನ ಕರಗ ಮಹೋತ್ಸವ ಹಾಗೂ ಧರ್ಮರಾಯಸ್ವಾಮಿ ಮಹಾ ರಥೋತ್ಸವ ನಡೆಯಲಿದೆ. ಕರಗಕ್ಕೆ 50 ಲಕ್ಷ ರೂಪಾಯಿ ಸಹಾಯಧನ ಹಣ ಬಿಡುಗಡೆ ಮಾಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ