ಆಕಳು ಜನ್ಮ ನೀಡಿದ ಕರುಗಳೆಷ್ಟು ಗೊತ್ತಾ?

ಭಾನುವಾರ, 29 ಜುಲೈ 2018 (14:33 IST)
ಹೈನುಗಾರಿಕೆಯನ್ನೇ ನಂಬಿ ಜೀವನೊಪಾಯ ಕಂಡು ಕೊಂಡ ಹುಬ್ಬಳ್ಳಿಯ ಗುರುನಾಥ ನಗರದ ನಿವಾಸಿ ಈರಣ್ಣ ಭಾವಿಕಟ್ಟಿ ಎಂಬುವವರು ಹೈನುಗಾರಿಕೆ ಮಾಡಲೆಂದೆ ಮೊದಲಿಗೆ ಎರಡು ಆಕಳು ಗಳನ್ನ ಸಾಕಿದ್ದರು. ನಂತರದಲ್ಲಿ ಆಹಾರ ಮೇವು ಕೊರತೆ ಇದ್ದರೂ ಕೂಡ ಎದೆಗುಂದದೆ ಇಂದಿಗೆ  30  ಆಕಳುಗಳನ್ನ ಸಾಲ ಸೋ ಮಾಡಿ ಮನೆ ಸದಸ್ಯರಂತೆ ಕಾಣುತ್ತಿದ್ದಾರೆ.

ಅದರಲ್ಲೆ ಸಮಾಜ ಸೇವೆಯನ್ನು ಕೂಡ ಮಾಡುತ್ತಿದ್ದಾರೆ. ಕೆಲವು ನವಜಾತ ಶಿಶುಗಳಿಗೆ ತಾಯಿ ಹಾಲು ಸಮರ್ಪಕವಾಗಿ ಪೂರೈಕೆ ಯಾಗದೆ ಹಸಿವಿನಿಂದ ಬಳಲುತ್ತಿದ್ದರೆ. ಅಂತಹ ವ್ಯಕ್ತಿಗಳು ಈರಣ್ಣ ಅವರ ಬಳಿ ಕಡಿಮೆ ದರಕ್ಕೆ ಹಾಲು ಪಡೆದು ಧನ್ಯರಾಗ್ತಾರೆಇನ್ನೂ ಮೂಳೆ ಮುರಿತಕ್ಕೊಳಗಾದವರು ಸಹ ಹಲವು ಆಯುರ್ವೇದಿಕ್  ಔಷಧಿಗಳಿಗೆ ಆಕಳ ಹಾಲೆ ಶ್ರೇಷ್ಠ ಅಂತಾರೆ ಪೂರ್ವಜರು.

ಇದೆ ಕಾಯಕವನ್ನ ನಂಬಿ ಉಪಜೀವನ ಕಂಡು ಕೊಂಡ ಈರಣ್ಣ ಭಾವಿಕಟ್ಟಿಗೆ  ಕೆಲವು ಆಕಳು ಗಳ ಪೈಕಿ ಅಕ್ಕ ತಂಗಿ ಎಂಬ  ಹೆಸರಿಸಿದ್ದ. ಎರಡು ಆಕಳುಗಳ ಪೈಕಿ ಅಕ್ಕ ಎಂಬ ಆಕಳು ಇಂದು ಮುಂಜಾನೆ 6ರ ಸಮಯದಲ್ಲಿ ಎರಡು ಅವಳಿ ಜವಳಿ ಕರುಗಳಿಗೆ ಜನ್ಮ ನೀಡಿದೆ. ನೆರೆ ಹೊರೆಯ ನಿವಾಸಿಗಳಲ್ಲಿಯು ಕೂಡ ಆಕಳು ಸಂತಸ ತಂದಿದೆ ಎಂದು ಹರ್ಷವ್ಯಕ್ತ ಪಡಿಸುತ್ತಿದ್ದಾರೆಆದರೆ ಆಕಳುಗಳು ಅವಳಿ ಕರುಗಳಿಗೆ ಜನ್ಮ ನೀಡುವುದು ಅಪರೂಪ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ