ಸೊಸೆಯ ಮೇಲಿನ ಅನುಮಾನದಿಂದ ಮಾವ ಹೀಗಾ ಮಾಡೋದು?

ಗುರುವಾರ, 31 ಡಿಸೆಂಬರ್ 2020 (07:59 IST)
ಮುಂಬೈ : ಸೊಸೆಯನ್ನು ಮಗ ಮದುವೆಯಾಗಿದ್ದಕ್ಕೆ ಹಾಗೂ ಆಕೆಯ ನಡತೆಯ ಬಗ್ಗೆ ಅನುಮಾನವಿದ್ದ ಹಿನ್ನಲೆಯಲ್ಲಿ ಆಕೆಯ ಮಾವ ತನ್ನ ಇಬ್ಬರು ಸ್ನೇಹಿತರ ಜೊತೆ ಸೇರಿ ಅವಳನ್ನು ಕೊಲೆ ಮಾಡಿದ ಘಟನೆ ಮುಂಬೈನ ಮಾಲ್ವಾನಿಯ ಅಕ್ಸಾ ಬೀಚ್ ನಲ್ಲಿ ನಡೆದಿದೆ.

ಮೃತಳು ಹಾಗೂ ಆರೋಪಿಯ ಮಗ 3 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾದರು. ಇದು ಆರೋಪಿಗೆ ಇಷ್ಟವಿರಲಿಲ್ಲ. ಅಲ್ಲದೇ ಆಕೆಯ ನಡತೆಯ ಬಗ್ಗೆ ಆರೋಪಿ ಆಗಾಗ ಅನುಮಾನಪಡುತ್ತಿದ್ದರು. ಹಾಗಾಗಿ ಮಗ ಕೆಲಸಕ್ಕೆಂದು ಹೊರ ಹೋದಾಗ ಆರೋಪಿ ಮಾವ ತನ್ನ ಇಬ್ಬರು ಸ್ನೇಹಿತರ ಜೊತೆ ಸೇರಿ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಸಮುದ್ರಕ್ಕೆ ಎಸೆದಿದ್ದಾರೆ.

ಆಕೆಯ ಶವ ಪತ್ತೆಯಾದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಆರೋಪಿ ಮಾವ ಸಿಕ್ಕಿಹಾಕಿಕೊಂಡಿದ್ದಾನೆ. ಹಾಗಾಗಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ