ಜನಾರ್ದನ ರೆಡ್ಡಿ ಜಾಮೀನು ರದ್ದಿಗೆ ಎಸ್‌‍ಐಟಿ ಮನವಿ

ಮಂಗಳವಾರ, 7 ನವೆಂಬರ್ 2017 (15:35 IST)
ಅಕ್ರಮ ಗಣಿಗಾರಿಕೆ ಅವ್ಯವಹಾರದಲ್ಲಿ ಆರೋಪಿಯಾಗಿರುವ ಬಿಜೆಪಿ ಮುಖಂಡ ಗಾಲಿ ಜನಾರ್ದನ ರೆಡ್ಡಿ ತನಿಖೆಗೆ ಹಾಜರಾಗುತ್ತಿಲ್ಲವಾದ್ದರಿಂದ ಅವರ ಜಾಮೀನು ರದ್ದುಗೊಳಿಸುವಂತೆ ಕೋರಿ ವಿಶೇಷ ತನಿಖಾ ತಂಡ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.
11 ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಪಡೆದಿರುವ ರೆಡ್ಡಿ, ವಿಚಾರಣೆಗಾಗಿ ನೋಟಿಸ್ ನೀಡಿದರೂ ಹಾಜರಾಗುತ್ತಿಲ್ಲ. ಕೂಡಲೇ ಅವರ ಜಾಮೀನು ರದ್ದುಗೊಳಿಸಬೇಕು ಎಂದು ಎಸ್‌ಐಟಿ ಕೋರಿದೆ.
 
ಎಸ್‌ಐಟಿ ಸಲ್ಲಿಸಿದ ಅರ್ಜಿಯನ್ನು ವಿರೋಧಿಸಿ ಆಕ್ಷೇಪಣೆ ಸಲ್ಲಿಸಿದ ರೆಡ್ಡಿ ಪರ ವಕೀಲರು ತಮ್ಮ ಕಕ್ಷಿದಾರ ತನಿಖೆಗೆ ಎಲ್ಲಾ ರೀತಿಯ ಬೆಂಬಲ ನೀಡುತ್ತಿದ್ದಾರೆ ಎಂದು ಪ್ರತಿವಾದ ಮಂಡಿಸಿದ್ದಾರೆ.
 
 ಲೋಕಾಯುಕ್ತ ವಿಶೇಷ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ನವೆಂಬರ್ 14 ಕ್ಕೆ ಮುಂದೂಡಿದೆ ಎಂದು ನ್ಯಾಯಾಲಯದ ಮೂಲಗಳು ತಿಳಿಸಿವೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ