ಹನಿಪ್ರೀತ್ ಪೊಲೀಸರಿಗೆ ಶರಣಾಗಲೇಬೇಕು: ಹೈಕೋರ್ಟ್

ಮಂಗಳವಾರ, 26 ಸೆಪ್ಟಂಬರ್ 2017 (16:09 IST)
ಬಾಬಾ ರಾಮ್ ರಹೀಮ್ ದತ್ತುಪುತ್ರಿಯಾದ ಹನಿಪ್ರೀತ್ ಸಿಂಗ್ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಹನಿಪ್ರೀತ್ ಪೊಲೀಸರಿಗೆ ಶರಣಾಗಲೇಬೇಕು ಎನ್ನುವ ಸೂಚನೆ ನೀಡಿದೆ.
ಹನಿಪ್ರೀತ್ ಸಿಂಗ್ ಪಂಜಾಬ್-ಹರಿಯಾಣಾ ಕೋರ್ಟ್‌ಗೆ ಅರ್ಜಿ ಸಲ್ಲಿಸುವುದು ಬಿಟ್ಟು ದೆಹಲಿ ಹೈಕೋರ್ಟ್‌ಗೆ ಯಾಕೆ ಅರ್ಜಿ ಸಲ್ಲಿಸಿದ್ದಾರೆ ಎನ್ನುವ ನ್ಯಾಯಮೂರ್ತಿಗಳ ಪ್ರಶ್ನೆಗೆ ಉತ್ತರಿಸಿದ ಹನಿಪ್ರೀತ್ ಪರ ವಕೀಲ, ಹನಿಪ್ರೀತ್ ದೆಹಲಿ ನಿವಾಸಿಯಾಗಿದ್ದರಿಂದ ದೆಹಲಿ ಕೋರ್ಟ್‍‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.
 
ನಮ್ಮ ಕಕ್ಷಿದಾರಳಾದ ಹನಿಪ್ರೀತ್‌ಗೆ ಜೀವ ಬೆದರಿಕೆಯಿದೆ. ಜೀವ ಬೆದರಿಕೆ ಇರುವ ಕಾರಣಕ್ಕೆ ಪಂಜಾಬ್ ಹರಿಯಾಣಾ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿಲ್ಲ ಎಂದು ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.
 
ಹನಿಪ್ರೀತ್ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ತೀರ್ಪು ಕಾಯ್ದಿರಿಸಿದೆ ಎಂದು ನ್ಯಾಯಾಲಯದ ಮೂಲಗಳು ತಿಳಿಸಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ