ಟಿಕೇಟ್ ಅರ್ಜಿ ಸಲ್ಲಿಕೆಗೇ ಟಿಕೇಟ್ ಆಕಾಂಕ್ಷಿಗಳು ಭಾರಿ ಶಕ್ತಿಪ್ರದರ್ಶನ ಮಾಡಿದ್ದಾರೆ.ಚುನಾವಣೆಗೆ ನಾಮಪತ್ರ ಸಲ್ಲಿಸುವ ಮಾದರಿಯಲ್ಲೇ ಟಿಕೇಟ್ ಆಕಾಂಕ್ಷಿ ಧನಂಜಯ್ ಜಿ ಕೆಪಿಸಿಸಿಗೆ ಆಗಮಿಸಿದರು.ಸುಮಾರು ೩೦೦ ಬಸ್ ಗಳಲ್ಲಿ ಟಿಕೇಟ್ ಆಕಾಂಕ್ಷಿ ಧನಂಜಯ್ ಬೆಂಬಲಿಗರನ್ನು ದಾಸರಹಳ್ಳಿಗೆ ಕರೆತಂದಿದರು.ಸುಮಾರು ೫ ಸಾವಿರಕ್ಕೂ ಹೆಚ್ಚು ಮಂದಿಯೊಂದಿಗೆ ಬಂದು ಟಿಕೇಟ್ ಅರ್ಜಿ ಸಲ್ಲಿಕೆ ಮಾಡಿದರು.
ಕೆಪಿಸಿಸಿ ಟಿಕೇಟ್ ಅರ್ಜಿ ಸಲ್ಲಿಕೆಗೆ ನಾಳೆ ಕೊನೆಯ ದಿನವಿರುವುದರಿಂದ ಬ್ಯಾಂಡು, ಜಾನಪದ ಕಲಾ ತಂಡಗಳು, ತಮಟೆ ವಾದ್ಯಗಳೊಂದಿಗೆ ಬಂದು ಟಿಕೇಟ್ ಆಕಾಂಕ್ಷಿ ಅರ್ಜಿ ಸಲ್ಲಿಸಿದರು.ಕೆಪಿಸಿಸಿ ಮುಂದೆ ಜನಜಾತ್ರೆ ನೋಡಿ ಕಾಂಗ್ರೆಸ್ ನಾಯಕರು ದಂಗುಬಡಿದರು.