ಇಂದಿನಿಂದ ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆ ಆರಂಭ

ಭಾನುವಾರ, 20 ನವೆಂಬರ್ 2022 (20:23 IST)
ಬೆಂಗಳೂರಿಗರಿಗೆ ಹಬ್ಬದ ಸಂಭ್ರಮ ನೀಡುತ್ತಿದ್ದ ಪರಿಷೆ ಕೋವಿಡ್ ಕರಿನೆರಳಿನಿಂದ ಕಳೆದೆರಡು ವರ್ಷಗಳಿಂದ ನಡೆದಿರಲಿಲ್ಲ. ಹೀಗಾಗಿ ಈ ಬಾರಿ ಕಡ್ಲೆಕಾಯಿ ಪರಿಷೆ ಎಂಜಾಯ್ ಮಾಡಲು ಜನ ತುದಿಗಾಲಲ್ಲಿ ನಿಂತಿದ್ದಾರೆ. ದೇವಸ್ಥಾನದ ಸುತ್ತಲೂ ಜಾತ್ರೆಯ ವಾತಾವರಣ ಮನೆಮಾಡಿದ್ದು ಕಡಲೆಕಾಯಿ ಪರಿಷೆಯಲ್ಲಿ ಲಕ್ಷಾಂತರ ಜನ ಭಾಗಿಯಾಗಿದ್ದರು. 

ವಾಡಿಕೆಯಂತೆ ಬಸವನಗುಡಿಯ ದೊಡ್ಡ ಬಸವೇಶ್ವರ ದೇವಾಲಯ ಆವರಣದಲ್ಲಿ ಪ್ರತಿ ವರ್ಷವೂ ಕೂಡ ಕಡೇ ಕಾರ್ತಿಕ ಸೋಮವಾರದಿಂದ ಕಡ್ಲೆಕಾಯಿ ಪರಿಷೆ ನಡೆಯುತ್ತದೆ. ಆದರೆ, ವಾರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಕಡಲೆಕಾಯಿ ಪರಿಷೆಗೆ ಬರುವ ಕಾರಣ ದೇವಸ್ಥಾನ ಹಾಗೂ ದೇವಸ್ಥಾನದ ಆವರಣದಲ್ಲಿ ಪೂರ್ವ ಸಿದ್ಧತೆ ಗಳನ್ನು ಮಾಡಕೊಳ್ಳಲಾಗಿದೆ. ಈಗಾಗಲೆ  ಚಿತ್ರದುರ್ಗ, ದಾವಣಗೆರೆ, ಕೋಲಾರ ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ 500 ಕ್ಕೂ ಹೆಚ್ಚು ರೈತರು ಕಡ್ಲೆಕಾಯಿ ಪರಿಷೆಯಲ್ಲಿ ಅಂಗಡಿಗಳನ್ನು ಹಾಕಿ ವ್ಯಾಪಾರ  ಶುರು ಮಾಡಿದ್ದಾರೆ. 

ಇನ್ನು ಲಕ್ಷಾಂತರ ಜನ ಭಾಗಿಯಾಗುವ ನಿರೀಕ್ಷೆಇರೋದರಿಂದ  ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಯಾವುದೇ ಹಾನಿಯಾಗದಂತೆ ಪೋಲಿಸರ ನಿಯೋಜನೆ ಮಾಡಲಾಗಿದೆ. 400 ಜನ ಪೋಲಿಸರು, 4 ಕೆಎಸ್ಆರ್ಪಿ ತುಕಡಿ ಹಾಗೂ 25 ರಿಂದ 30 ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗಿದೆ. ಪರಿಷೆ ಎಂದರೆ ಕೇವಲ ಕಡ್ಲೆಕಾಯಿ ಮಾರಾಟವಷ್ಟೇ ಅಲ್ಲ, ಒಂದು ಹಳ್ಳಿಯ ಚಿತ್ರಣವೇ ತೆರೆದುಕೊಳ್ಳಲಿದೆ. ಇಂದಿನಿಂದ 3 ದಿನಗಳ ಕಾಲ ಪರಿಷೆ ನಡೆಯಲಿದ್ದು ಜನ ಪರಿಷೆಗೆ ತಂಡೋಪತಂಡವಾಗಿ ಬರಲಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ