ಸುಮಲತಾ ಹೆಸರಿನ ಅಭ್ಯರ್ಥಿಗಳನ್ನು ಜೆಡಿಎಸ್ ಕಣಕ್ಕೆ ಇಳಿಸಿರುವ ತಂತ್ರಕ್ಕೆ ನೆಟ್ಟಿಗರು ಗರಂ ಆಗಿದ್ದಾರೆ.
ಮೂವರು ಸುಮಲತಾ ಹೆಸರಿನ ಅಭ್ಯರ್ಥಿಗಳನ್ನು ಎಲೆಕ್ಷನ್ ಗೆ ನಿಲ್ಲಿಸಿದ ಜೆಡಿಎಸ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಸುಮಲತಾ ಹೆಸರಿನ ತಂತ್ರಕ್ಕೆ ಮಂಡ್ಯ ಜನರು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಜೆಡಿಎಸ್ ಪಕ್ಷಕ್ಕೆ ನೆಟ್ಟಿಗರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಸುಮಲತಾ ಹೆಸರಿನ ಮೂವರನ್ನು ನಿಲ್ಲಿಸಿ ಚುನಾವಣೆಗೂ ಮೊದಲೇ ಸೋಲೊಪ್ಪಿಕೊಂಡ ಜೆಡಿಎಸ್ ಎಂದು ವ್ಯಂಗ್ಯವಾಡಲಾಗುತ್ತಿದೆ.
ಜೆಡಿಎಸ್ ನ ಕುಲಗೆಟ್ಟ ರಾಜಕೀಯ ಬಹಿರಂಗವಾಗಿದೆ ಎಂದೂ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಲ್ವರು ಸುಮಲತಾರನ್ನು ನಿಲ್ಲಿಸಿದ್ದು ನಿಖಿಲ್ ಎಲ್ಲಿದ್ದಿಯಪ್ಪ ಎಂದು ಹುಡುಕಲಿಕ್ಕಾ? ಎಂದು ವ್ಯಂಗ್ಯವಾಗಿ ಪೋಸ್ಟ್ ಹರಿಬಿಡಲಾಗುತ್ತಿದೆ.
ಮತದಾರರ ಟೀಕೆಗೆ ಸುಮಲತಾ ಹೆಸರಿನ ಜೆಡಿಎಸ್ ಅಸ್ತ್ರ ಗುರಿಯಾಗಿದೆ. ಮತದಾರರಲ್ಲಿ ಗೊಂದಲ ಮೂಡಿಸಲು ಮೂವರು ಸುಮಲತಾರಿಂದ ನಾಮಪತ್ರ ಸಲ್ಲಿಕೆ ಮಾಡಲಾಗಿದೆ.