ನರಭಕ್ಷಕ ಚಿರತೆ ಸೆರೆ!

ಶುಕ್ರವಾರ, 21 ಡಿಸೆಂಬರ್ 2018 (16:15 IST)
ಕೊನೆಗೂ ಬೋನಿನ ಬಲೆಗೆ ನರಭಕ್ಷಕ ಚಿರತೆ ಬಿದ್ದಿದೆ.

ನಾಯಿ ಹಾಕಿ ಏಳು ಬೋನು ಅಳವಡಿಸಿದ್ದ ಅರಣ್ಯ ಇಲಾಖೆಯ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ ವಾರ ಮಗುವನ್ನು ಹೊತ್ತೊಯ್ದಿದ್ದ ಚಿರತೆಯಿಂದಾಗಿ ಅಲ್ಲಿನ ಜನರು ತೀವ್ರ ಆತಂಕದಲ್ಲಿದ್ದರು.
ಇಂದು ನಸುಕಿನ ವೇಳೆ ಬೋನಿಗೆ ಚಿರತೆ ಬಿದ್ದಿದೆ.

ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನ ಸೋಮಲಾಪುರ ಗ್ರಾಮದ ಬಳಿ ಘಟನೆ ನಡೆದಿದೆ. ಸೋಮಲಾಪುರ ಗುಡ್ಡದ ಬಳಿ ಅಳವಡಿಸಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದೆ.

ಬೋನಿನಲ್ಲಿ ಬಿದ್ದ ಚಿರತೆ ನೋಡಲು ಜನರು ಮುಗಿಬಿದ್ದರು. ಕಳೆದೊಂದು ವಾರದಿಂದ ಚಿರತೆ ಹಿಡಿಯಲು ಕೂಂಬಿಂಗ್ ಕಾರ್ಯಾಚರಣೆ ಮಾಡಿದ್ದ ಅರಣ್ಯ ಇಲಾಖೆ ತಮ್ಮ ಕೆಲಸದಲ್ಲಿ ಸಫಲತೆಕಂಡಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ