ಜೀವ ಭಯಕ್ಕೆ ಕಾರಣವಾಗಿದ್ದ ಚಿರತೆ ಕೊನೆಗೂ ಸೆರೆಯಾಗಿದ್ದು ಹೇಗೆ ಗೊತ್ತಾ?

ಶುಕ್ರವಾರ, 16 ನವೆಂಬರ್ 2018 (18:58 IST)
ಜನರಲ್ಲಿ ಜೀವಭಯ ಉಂಟು ಮಾಡಿದ್ದ ಚಿರತೆಗಳು ಕೊನೆಗೂ ಸೆರೆಸಿಕ್ಕಿವೆ.

ಉಡುಪಿ ಜಿಲ್ಲೆಯ ಕುಂದಾಪುರದ ಕಾಳಾವರ ಹತ್ತಿರದ ಕಕ್ಕೇರಿಯಲ್ಲಿ ಈ ಘಟನೆ ನಡೆದಿದೆ. ಕಾಳಾವರ ಕಕ್ಕೇರಿಯಲ್ಲಿ ಬೋನಿಗೆ ಬಿದ್ದ ಚಿರತೆ ಸೆರೆಯಾಗಿವೆ. ತಡರಾತ್ರಿ ಆರೇಳು ವರ್ಷದ ಗಂಡು ಚಿರತೆ ಸೆರೆ ಸಿಕ್ಕಿದೆ.

ಕಳೆದ ವಾರವಷ್ಟೇ ಬೋನಿಗೆ ಬಿದ್ದಿದ್ದ ಹೆಣ್ಣು ಚಿರತೆ, ಈಗ ಗಂಡು ಚಿರತೆ ಸೆರೆ ಸಿಕ್ಕಿದೆ. ಪರಿಸರದಲ್ಲಿ ಚಿರತೆ ಓಡಾಟದ ಬಗ್ಗೆ ಆತಂಕದಲ್ಲಿ ಜನರಿದ್ದರು.

ಎರಡು ವಾರಗಳಿಂದ ಬೋನಿಟ್ಟಿದ್ದ ಅರಣ್ಯ ಇಲಾಖೆ ಚಿರತೆ ಸೆರೆಹಿಡಿಯಲು ಯತ್ನ ನಡೆಸಿತ್ತು. ವಾರಗಳ ಅಂತರದಲ್ಲಿ ಎರಡು ಚಿರತೆಗಳು ಸೆರೆಯಾದಂತಾಗಿವೆ. ಒಂದೇ ಸ್ಥಳದಲ್ಲಿ ಚಿರತೆಗಳು ಬೋನಿಗೆ ಬಿದ್ದಿವೆ. ಆರ್.ಎಫ್.ಓ ಪ್ರಭಾಕರ ಕುಲಾಲ್, ಅರಣ್ಯಾಧಿಕಾರಿ ಉದಯ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ