ಹೊಸ ವರ್ಷದ ಸಂತಸದಲ್ಲಿ ಮೈಮರೆಯುವ ವಾಹನ ಸವಾರರೇ ಎಚ್ಚರ

ಸೋಮವಾರ, 31 ಡಿಸೆಂಬರ್ 2018 (09:43 IST)
ಬೆಂಗಳೂರು : ಹೊಸ ವರ್ಷದ ಆಚರಣೆಯ ಸಂಭ್ರಮದಲ್ಲಿ ಮೈಮರೆಯುವ ವಾಹನ ಸವಾರರಿಗೆ ಪೊಲೀಸ್ ಅಧಿಕಾರಿಗಳು ಖಡಕ್ ಎಚ್ಚರಿಕೆಯೊಂದನ್ನು ನೀಡಿದ್ದಾರೆ.


ವಾಹನ ಸವಾರರು ಡ್ರಿಂಕ್ ಆ್ಯಂಡ್ ಡ್ರೈವ್ ಮಾಡಿದರೆ ಬಾರೀ ದಂಡ ವಿಧಿಸುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಇಂದು ಬೆಂಗಳೂರಿನ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ನಾಕಾ ಬಂದಿ ಹಾಕಿ ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ನಡೆಸಲಿದ್ದಾರೆ. ನಗರದ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ರಿಚ್ಯಂಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಅಶೋಕನಗರದ ಎಲ್ಲ ಕಡೆ ಟ್ರಾಫಿಕ್ ಪೊಲೀಸರಿಂದ ಇಂದು ರಾತ್ರಿ 11 ಗಂಟೆಯಿಂದ ಬೆಳಗಿನ ಜಾವ 4 ಗಂಟೆಯವರೆಗೆ ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ನಡೆಯಲಿದೆ.


ಆದ್ದರಿಂದ ಹೊಸ ವರ್ಷದ ಪಾರ್ಟಿಗೆ ಹೋಗುವವರು ತಮ್ಮ ವಾಹನ ಚಲಾಯಿಸಲು ಒಬ್ಬ ಚಾಲಕನನ್ನು ನೇಮಿಸಿಕೊಂಡರೆ  ಅಥವಾ ಖಾಸಗಿ ಕ್ಯಾಬ್ ಬುಕ್ ಮಾಡಿದರೆ ಉತ್ತಮ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ