ಪಾದರಾಯನಪುರದ ಹಲ್ಲೆ ಪ್ರಕರಣ; ಸ್ಪೋಟಕ ಮಾಹಿತಿ ಬಹಿರಂಗ

ಮಂಗಳವಾರ, 21 ಏಪ್ರಿಲ್ 2020 (09:25 IST)
ಬೆಂಗಳೂರು : ಪಾದರಾಯನಪುರದಲ್ಲಿ ಪೊಲೀಸರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ವಿಚಾರಣೆಯ ವೇಳೆ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.


ಪಾದರಾಯನಪುರ ಗಲಾಟೆಯ ಕಿಂಗ್ ಪಿನ್ ಗಳಾದ ಎ1 ಆರೋಪಿ ವಜೀರ್, ಎ2 ಇರ್ಫಾನ್ , ಎ3 ಕಬೀರ್, ಎ4 ಇರ್ಷಾದ್ ಎ5 ಫರ್ಜುವಾ ಅಲಿಯಾಸ್ ಲೇಡಿ ಡಾನ್  ಕಾರಣರಾಗಿದ್ದರು. ಇವರು ಪಾದರಾಯನಪುರ ಸೀಲ್ ಡೌನ್ ಬಂಡವಾಳ ಮಾಡ್ಕೊಂಡಿದ್ರು, ಸೀಲ್ ಡೌನ್ ಹಿನ್ನಲೆ ಹೊರ ಜಗತ್ತಿನೊಂದಿಗೆ ಸಂಪರ್ಕವಿರಲಿಲ್ಲ. ಹೀಗಾಗಿ ಪಾದರಾಯನಪುರ ನಿವಾಸಿಗಳು ಆವೇಶಕ್ಕೆ ಒಳಗಾಗಿದ್ದರು.


ಅಲ್ಲದೇ 2 ದಿನದ ಹಿಂದೆ ಅಗತ್ಯವಸ್ತುಗಳು ಸರಿಯಾಗಿ ಸಿಕ್ಕಿರಲಿಲ್ಲ. ಅದಕ್ಕಾಗಿ ಪೊಲೀಸರ ಜತೆ ಜನರು ವಾಗ್ವಾದಕ್ಕಿಳಿದಿದ್ರು. ಆಗ ಮಧ್ಯ ಪ್ರವೇಶಿಸಿದ ಕಾರ್ಪೋರೇಟರ್ ಅಗತ್ಯ ವಸ್ತುಗಳ ಪೂರೈಕೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಯಾವುದೇ ಅಗತ್ಯ ವಸ್ತುಗಳು ಪೂರೈಕೆ ಮಾಡಿರಲಿಲ್ಲ. ಇದರಿಂದ ಪಾದರಾಯನಪುರದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಜನರ ಆಕ್ರೋಶವನ್ನು ಬಂಡವಾಳ ಮಾಡಿಕೊಂಡು ಐವರು ಆರೋಪಿಗಳು ಜನರನ್ನು ಪ್ರಚೋದಿಸಿ ಗಲಾಟೆ ಮಾಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ