ಮಾವನ ಮನೆಗೆ ಹೋಗಿ ಕೊರೊನಾ ಹರಡಿದ ಅಳಿಯನ ಮೇಲೆ ಕೇಸ್

ಭಾನುವಾರ, 14 ಜೂನ್ 2020 (16:08 IST)
ಮಾವನ ಮನೆಗೆ ಹೋಗಿಬಂದು ಕೊರೊನಾ ಹರಡಿದ ಅಳಿಯನ ವಿರುದ್ಧ ಕೇಸ್ ದಾಖಲಾಗಿದೆ.

ಕೊರೊನಾ ವೈರಸ್ ಹರಡಿದ ವ್ಯಕ್ತಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ತುಮಕೂರು ಜಿಲ್ಲೆಯ ಶಿರಾದ ಪಿ‌ 5813 ವ್ಯಕ್ತಿ ವಿರುದ್ಧ ಕೇಸ್ ದಾಖಲಿಸಲಾಗಿದೆ.

ಶಿರಾ ನಗರವನ್ನು ಕಂಟೈನ್ ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿದ್ದರೂ ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿ ಹಿಂದೂ ಪುರದಲ್ಲಿದ್ದ ಮಾವನ ಮನೆಗೆ ಹೋಗಿ ಬಂದ ನಂತರವೂ ವಿಷಯ ಮುಚ್ಚಿಟ್ಟಿದ್ದ ಎನ್ನಲಾಗಿದೆ.

ಹೆಂಡತಿ, ಮಕ್ಕಳೊಂದಿಗೆ ಶಿರಾಗೆ ಬೈಕ್ ನಲ್ಲಿ ವಾಪಸ್ ಬಂದಿದ್ದ. ತನ್ನೊಂದಿಗೆ ತನ್ನ ಕುಟುಂಬದ 6 ಮಂದಿಗೆ ಸೋಂಕು ಹರಡಿದ ಹಿನ್ನೆಲೆಯಲ್ಲಿ ಶಿರಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ