ಬೆಂಗಳೂರಲ್ಲಿ ಹೆಚ್ಚಾಗ್ತಿದೆ ರೋಡ್ ರೇಜ್ ಪ್ರಕರಣಗಳು

ಬುಧವಾರ, 30 ಆಗಸ್ಟ್ 2023 (19:30 IST)
ನಗರದ ಮುಖ್ಯ ರಸ್ತೆಗಳಲ್ಲೇ ಕಾರು ಅಡ್ಡ ಹಾಕೋದು, ಕಾರುಗಳನ್ನ ಫಾಲೋ ಮಾಡಿ ಹಲ್ಲೆ ಮಾಡೋದು, ಗ್ಲಾಸ್ ಹೊಡೆದಾಕಿರೋ ಕೇಸ್ ಗಳು ಬ್ಯಾಕ್ ಟು ಬ್ಯಾಕ್ ರಿಪೋರ್ಟ್ ಆಗ್ತಿವೆ.ಸೋಷಿಯಲ್ ಮೀಡಿಯಾದಲ್ಲೇ ಪೊಲೀಸರನ್ನ ಟ್ಯಾಗ್ ಮಾಡ್ತಿರೋ ಸಾರ್ವಜನಿಕರು ಸಾಲು ಸಾಲು ದೂರು ನೀಡ್ತಿದ್ದಾರೆ.

ಗಾಡಿ ಟಚ್ ಆಯ್ತು ಅಂತಾ ಕಿರಿಕ್ ಮಾಡೋದು, ರಾತ್ರೋ ರಾತ್ರಿ ಕುಡಿದ ಮತ್ತಿನಲ್ಲಿ ಅಕರು ಅಡ್ಡ ಹಾಕಿ ಸುಲಿಗೆ ಮಾಡೋದು, ಕಾರು ಗ್ಲಾಸ್ ಹೊಡೆದು ಪುಂಡಾಟ ಮೆರೆಯೋವಂತಹ ಕೇಸ್ ಗಳು ವರದಿಯಾಗ್ತಿವೆ.  ಹಾಡ ಹಗಲೇ ಮತ್ತೊಂದು  ಹೆಚ್ ಎಎಲ್ ಫ್ಲೈ ಓವರ್ ಬಳಿ ಕಾರಿನಲ್ಲಿ ಹೋಗ್ತಿದ್ದ ವ್ಯಕ್ತಿಯನ್ನ ಅಡ್ಡ ಹಾಕಿ ಕಿರಿಕಿರಿ ಮಾಡಿದ್ದ ಪುಂಡನೊಬ್ಬ ರಸ್ತೆ ಮಧ್ಯೆಯೇ ಬೈಕ್ ಅಡ್ಡ ಹಾಕಿ ಅಚಾಜ್ ಹಾಕಿ ಕಾರಿಗೆ ಒದ್ದು ಉದ್ದಟತನ ತೋರಿದ್ದಾನೆ. ಸದ್ಯ ಈ  ವಿಡಿಯೋ ಸಮೇತ ಕಾರು ಚಾಲಕ ಟ್ವಿಟ್ಟರ್ ನಲ್ಲಿ ದೂರು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ