ಸಿಲಿಕಾನ್ ಸಿಟಿ ಜನರೇ ಮನೆಯಿಂದ ಹೊರ ಬರೋ ಮುನ್ನ ಎಚ್ಚರ... ಎಚ್ಚರ

ಶನಿವಾರ, 26 ಆಗಸ್ಟ್ 2023 (15:05 IST)
ರಸ್ತೆಯಲ್ಲಿ ಬೇಕಾಬಿಟ್ಟಿಯಾಗಿ  ಬಿ ಎಂ ಟಿ ಸಿ ಖಾಸಗಿ ಡ್ರೈವರ್ ಗಳು ಬಸ್ ಚಲಾಯಿಸುತ್ತಿದ್ದಾರೆ.ನಗರದಲ್ಲಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ನ ಖಾಸಗಿ ಡ್ರೈವರ್ ಗಳ ದರ್ಪ ಮಿತಿಮೀರಿದೆ. ಕೆಲ ತಿಂಗಳ ಹಿಂದೆ ತರಬೇತಿ ನಿಡದೇ ಬಿಎಂಟಿಸಿ ಡ್ರೈವರ್ ಗಳನ್ನ ನೇಮಕಾತಿ ಮಾಡಿಕೊಳ್ಳಲಾಗಿದೆ.ಬಿಎಂಟಿಸಿ ಖಾಸಗಿ ಡ್ರೈವರ್ ಗಳಿಗೆ ಬ್ರೇಕ್ ಹಾಕದೇ ಇದ್ರೆ ಸಿಲಿಕಾನ್ ಸಿಟಿ ಜನತೆಗೆ ಗಂಡಾಂತರ್ ಫಿಕ್ಸ್ ಆಗಿದೆ.ಓವರ್ ಟೇಕ್  ಮಾಡಲು ಹೋಗಿ ಬಿಎಂಟಿಸಿ ಎಲೆಕ್ಟ್ರಿಕ್ ಖಾಸಗಿ ಡ್ರೈವರ್ ನಿಂದ ಎಡವಟ್ಟು ಆಗಿದೆ.ಕೂದಲೆಳೆ ಅಂತರದಲ್ಲಿ ನಗರದಲ್ಲಿ  ಭಾರೀ ಅನಾಹುತ ತಪ್ಪಿದೆ.
 
ಕಾರ್ ಗೆ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಡಿಕ್ಕಿ ಹೊಡೆಸಿದೆ.ನಗರದ ಕಂಟೋನ್ಮೆಂಟ್ ರಸ್ತೆಯಲ್ಲಿ ಕಾರ್ ಗೆ ಬಸ್ ಡಿಕ್ಕಿ ಹೊಡೆದಿದೆ.ಡಿಕ್ಕಿ ಹೊಡೆದ ಪರಿಣಾಮ ಕಾರ್ನ ಎಡಬದಿಯ ಮಿರರ್ ವಿಂಡೋಗ್ಲಾಸ್ ಪುಡಿಪುಡಿಯಾಗಿದೆ.KA51 AH4644 ಎಲೆಕ್ಟ್ರಿಕ್ ಬಸ್ ನಿಂದ ಕಾರ್ ಗೆ ಡಿಕ್ಕಿಯಾಗಿದೆ.ಇನ್ನೂ ಅರ್ಧ ಗಂಟೆಗೂ ಅಧಿಕ ಕಾಲ ಬಸ್ ನ ಕಾರ್ ಚಾಲಕ ಅಡ್ಡಗಟ್ಟಿದ್ದಾನೆ.ಪರಿಹಾರ ಕೊಡುವಂತೆ ಬಸ್ ಅಡ್ಡಗಟ್ಟಿದ್ದಾನೆ.ಬಸ್ ಬಿಡದಿದ್ದರೆ ಮೇಲೆ ಹತ್ತಿಸುವುದಾಗಿ ಕಂಡಕ್ಟರ್ ನಿಂದ ಕಾರ್ ಚಾಲಕನ ಮೇಲೆ ಅವಾಜ್  ಹಾಕಲಾಗಿದೆ.
 
ಖಾಸಗಿ ಡ್ರೈವರ್ ಗಳಿಗೆ ಬಸ್ ಕೊಟ್ಟಿರೋದೆ ಇದಕ್ಕೆ ಕಾರಣವೆಂದು ಕಾರ್ ಡ್ರೈವರ್ ಆಕ್ರೋಶ ವ್ಯಕ್ತಪಡಿಸಿದ್ದಾನೆ.ನಗರದಲ್ಲೇಡೆ ಬಿಎಂಟಿಸಿ ಖಾಸಗಿ ಡ್ರೈವರ್ ಗಳ ಹಾವಳಿ ಹೆಚ್ಚಿದೆ.ಓವರ್ ಟೆಕ್ ಮಾಡಲು ಹೋಗಿ ಕಾರ್ ಗೆ ಡಿಕ್ಕಿ ಹೊಡೆದಿದ್ದಾರೆ ಎಂದು ಕಾರ್ ಡ್ರೈವರ್ ಆರೋಪ ಮಾಡಿದ್ದಾನೆ.ಪರಿಹಾರ ಕೊಡುವವರೆಗೂ ಬಸ್ ಬಿಡುವುದಿಲ್ಲ ಎಂದು ಕಾರ್ ಡ್ರೈವರ್ ಬಸ್ ಮುಂದೆ ಪ್ರೊಟೆಸ್ಟ್ ಮಾಡ್ತಿದ್ದು,ಇನಾದ್ರೂ ಬ್ರೇಕ್ ಹಾಕ್ತಾರಾ ಸಾರಿಗೆ ಸಚಿವರು ಖಾಸಗಿ ಡ್ರೈವರ್ ಗಳ ನೇಮಕಕ್ಕೆ,ಇನ್ನಷ್ಟು ಅವಗಡಗಳು ನಡೆಯುವ ಮುನ್ನವೇ ಬ್ರೇಕ್ ಹಾಕ್ತಾರಾ ಸಾರಿಗೆ ಸಚಿವರು ಖಾಸಗಿ ಡ್ರೈವರ್ ಗಳಿಗೆ?ಬಿಎಂಟಿಸಿ ಬಸ್ ಖಾಸಗಿ ಡ್ರೈವರ್ ಎಡವಟ್ಟಿನಿಂದ ಸಾರ್ವಜನಿಕರಿಂದಲೂ ವಿರೋಧ ವ್ಯಕ್ತವಾಗಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ