ಒಬಿಸಿ ಮೀಸಲಾತಿ ಶೇ.51 ಕ್ಕೆ ಹೆಚ್ಚಿಸಲು ಶಿಫಾರಸ್ಸು: ಜಾತಿಗಣತಿ ವರದಿ ಬಹಿರಂಗ
ಒಬಿಸಿ ವರ್ಗಕ್ಕೆ ಈಗ ಶೇ.32 ರಷ್ಟು ಮೀಸಲಾತಿಯಿದೆ. ಇನ್ನೀಗ ಶೇ.51 ಕ್ಕೆ ಹೆಚ್ಚಳ ಮಾಡಬೇಕು ಎಂದು ಶಿಫಾರಸ್ಸು ಮಾಡಲಾಗಿದೆ. ಅದೇ ರೀತಿ ಹಾಲಿ ಇರುವ ಪ್ರವರ್ಗ 1 ರ ಬದಲಿಗೆ ಪ್ರವರ್ಗ ಎ ರಚನೆ ಮಾಡಲು ಶಿಫಾರಸ್ಸು ಮಾಡಲಾಗಿದೆ.
ಎಸ್ ಸಿಗೆ ಶೇ.17.15, ಎಸ್ ಟಿ ವರ್ಗದವರಿಗೆ ಶೇ.6.95 ರಷ್ಟು ಮೀಸಲಾತಿ ನೀಡುವಂತೆ ಶಿಫಾರಸ್ಸು ಮಾಡಲಾಗಿದೆ. ಸದ್ಯಕ್ಕೆ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10 ರಷ್ಟು ಮೀಸಲಾತಿಯಿದೆ.
ಆದರೆ ಈ ಜಾತಿಗಣತಿ ಶಿಫಾರಸ್ಸಿಗೆ ಒಕ್ಕಲಿಗರಿಂದ ವಿರೋಧ ವ್ಯಕ್ತವಾಗಿದೆ. ಜಾತಿಗಣತಿ ವರದಿ ಜಾರಿಯಾಗುವುದನ್ನು ನಾವು ಒಪ್ಪುವುದಿಲ್ಲ. ಒಂದು ವೇಳೆ ಜಾತಿಗಣತಿ ವರದಿ ಜಾರಿಯಾಗಬೇಕಾದರೆ ಸರಿಯಾಗಿ ಸಮೀಕ್ಷೆ ಮಾಡಿ ಅನುಷ್ಠಾನಕ್ಕೆ ಬರಲಿ ಎಂದು ಆಗ್ರಹಿಸಿದ್ದಾರೆ.