ಕಾವೇರಿ ನೀರು ಹಂಚಿಕೆ: ಅಧ್ಯಯನ ತಂಡದಿಂದ ಸುಪ್ರೀಂಕೋರ್ಟ್‌ಗೆ ಇಂದು ವರದಿ ಸಲ್ಲಿಕೆ

ಸೋಮವಾರ, 17 ಅಕ್ಟೋಬರ್ 2016 (12:07 IST)
ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಉಭಯ ರಾಜ್ಯಗಳಲ್ಲಿ ಅಧ್ಯಯನ ನಡೆಸಿರುವ ಕೇಂದ್ರದ ತಾಂತ್ರಿಕ ತಂಡ ತನ್ನ ವರದಿಯನ್ನು ಇಂದು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದೆ.
ನಾಳೆ ಸುಪ್ರೀಂಕೋರ್ಟ್‌ನಲ್ಲಿ ಕಾವೇರಿ ವಿವಾದದ ಮೂಲ ಅರ್ಜಿ ವಿಚಾರಣೆಗೆ ಬರಲಿದೆ. ಆದರೆ, ಈ ಬಾರಿ ದ್ವಿಸದಸ್ಯ ಪೀಠದ ಬದಲು ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಲಿದೆ. ಹೀಗಾಗಿ ರಾಜ್ಯಕ್ಕೆ ತಾತ್ಕಾಲಿಕ ರಿಲೀಫ್ ಸಿಗುವ ನಿರೀಕ್ಷೆಯಿದೆ. 
 
ಜಿ.ಎಸ್.ಝಾ ನೇತೃತ್ವದ ತಂಡ ಉಭಯ ರಾಜ್ಯಗಳ ಕಾವೇರಿ ಅಚ್ಚುಕಚ್ಚು ಪ್ರದೇಶಗಳಲ್ಲಿ ಅಧ್ಯಯನ ನಡೆಸಿತ್ತು. ಈ ವೇಳೆ ತಮಿಳುನಾಡಿಗಿಂತಲೂ ರಾಜ್ಯದಲ್ಲಿ ನೀರಿನ ಅಭಾವ ಹೆಚ್ಚಿದೆ. ಎಂಬ ಸತ್ಯಸಂಗತಿ ಅರಿತು ಕೇಂದ್ರ ತಂಡ ಮರುಕ ವ್ಯಕ್ತಪಡಿಸಿತ್ತು. ಹೀಗಾಗಿ ನಾಳೆ ನಡೆಯುವ ವಿಚಾರಣೆಯಲ್ಲಿ ರಾಜ್ಯಕ್ಕೆ ಒಂದಿಷ್ಟು ನ್ಯಾಯ ಸಿಗುವ ಅಶಾಭವನೆ ಹೊಂದಿದೆ. 
 
ಕೆಆರ್‌ಎಸ್, ಹೇಮಾವತಿ, ಕಬಿನಿ ಹಾಗೂ ಹಾರಂಗಿ ಜಲಾಶಯಗಳು ಹಾಗೂ ಜಲಾಶಯ ವ್ಯಾಪ್ತಿಯಲ್ಲಿ 2 ದಿನಗಳ ಕಾಲ ಅಧ್ಯಯನ ನಡೆಸಿ ವರದಿ ಸಿದ್ಧ ಮಾಡಿದೆ. ಈ ವೇಳೆ ಕಾವೇರಿ ಜಲಾನಯನ ಪ್ರದೇಶದ ಜನ ಕೂಡಾ ಕೇಂದ್ರದ ತಂಡದ ಮುಂದೆ ತಮ್ಮ ಸಂಕಷ್ಟವನ್ನು ತೋಡಿಕೊಂಡಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ