ಕಾವೇರಿ ನಿರ್ವಹಣಾ ಮಂಡಳಿ ರಚನೆ ಅಸಾಧ್ಯ

ಭಾನುವಾರ, 2 ಅಕ್ಟೋಬರ್ 2016 (17:09 IST)
ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಈ ಹಂತದಲ್ಲಿ ಮಂಡಳಿ ರಚನೆ ಅಸಾಧ್ಯ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನ್ನಾಡುತ್ತಿದ್ದ ಅವರು, ಕೋರ್ಟ್ ತೀರ್ಪು ಆಘಾತಕಾರಿಯಾಗಿದೆ. 
ತಜ್ಞರ ತಂಡ ಕಳುಹಿಸಿರಿ ಎಂದು ರಾಜ್ಯ ಸರ್ಕಾರ ಹಲವು ಬಾರಿ ಕೇಳಿಕೊಂಡಿದೆ. ಆದರೆ ಕೋರ್ಟ್ ಅದನ್ನು ಪುರಸ್ಕರಿಸುತ್ತಿಲ್ಲ. ಈ ಹಂತದಲ್ಲಿ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಅಸಾಧ್ಯ. ಇದನ್ನು ನಾನು ಕಾನೂನು ಸಚಿವನಾಗಿದ್ದಾಗಲೇ ಕೋರ್ಟ್‌ಗೆ ಸ್ಪಷ್ಟ ಪಡಿಸಿದ್ದೆ ಎಂದು ಹೇಳಿದ್ದಾರೆ.
 
ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ಮೊದಲೇ ಎಡವಿದೆ ಎಂದು ಅಭಿಪ್ರಾಯ ಪಟ್ಟ ಡಿವಿಎಸ್, ಕಾವೇರಿ ವಿಚಾರದಲ್ಲಿ ರಾಜ್ಯದ ಹಿತಕ್ಕೆ ಕೇಂದ್ರ ಬದ್ಧ. ಆದರೆ ವಿವಾದದಲ್ಲಿ ಪ್ರಧಾನಿ  ಮಧ್ಯಸ್ತಿಕೆ ವಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.
 
ಕಾವೇರಿ ವಿಚಾರವಾಗಿ ಇನ್ನೆರಡು ದಿನ ಕಾದು ನೋಡಿ. ನಿಮಗೆ ಎಲ್ಲವೂ ಪರದೆಯ ಮೇಲೆ ಗೊತ್ತಾಗುತ್ತದೆ ಎಂದು ಗೌಡರು ಹೇಳಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ