ಕಾವೇರಿ ನೀರಿನ ವಿಷಯದಲ್ಲಿ ಮುಂದೆ ಸಮಸ್ಯೆಯಾಗಲಿದೆ-ಸಂಸದ ಪಿ.ಸಿ ಮೋಹನ್

ಬುಧವಾರ, 1 ನವೆಂಬರ್ 2023 (16:46 IST)
ನಾಡಿನ ಜನತೆಗೆ 68ನೇ ವರ್ಷದ ಕರ್ನಾಟಕ ರಾಜ್ಯೋತ್ಸವ ಶುಭಾಷಯಗಳು.ಕರ್ನಾಟಕ ಅಂತ ನಾಮಕರಣ ಮಾಡಿ 50 ವರ್ಷವಾಗಿದೆ.ಬೆಂಗಳೂರಿಗೆ ಬಂದಿರೋ ಹೊರ ರಾಜ್ಯ, ಹೊರ ದೇಶದವರಿಗೆ ಕನ್ನಡ ಕಲಿಸಬೇಕು.ಅವರಿಗೆ ಕನ್ನಡ  ಭಾಷೆ ಕಲಿಸೋ ಬದಲು, ಅವರ ಭಾಷೆಯಲ್ಲಿ ಮಾತನಾಡುತ್ತಿದ್ದೇವೆ‌.ಇದರಿಂದ ನಮ್ಮ ಕನ್ನಡ ಭಾಷೆ ಬಳಕೆ ಕಡಿಮೆಯಾಗ್ತಿದೆ.ಮಳೆಯ ಕೊರತೆ ಹಿನ್ನೆಲೆ ಕಾವೇರಿ ನೀರಿನ ಕೊರತೆ ಎದುರಾಗಿದೆ.ನಿರೀಕ್ಷೆಯಷ್ಟು ಮಳೆಯಾಗಿಲ್ಲ.ಸುಪ್ರೀಂ ಕೋರ್ಟ್ ಆಧಾರದ ಮೇಲೆ ನೀರು ಬಿಡ್ತಿದ್ದು.ಮುಂದೆ ಸಮಸ್ಯೆ ಆಗಲಿದೆ.ಕರ್ನಾಟಕ ಜನತೆಗೆ ಹೆಚ್ಚು ಸಮಸ್ಯೆ ಆಗಲಿದೆ ಎಂದು ಪಿಸಿ ಮೋಹನ್ ಹೇಳಿದ್ದಾರೆ.
 
ಕೇಂದ್ರ ಸರ್ಕಾರ ಬರ ಪರಿಹಾರ ಕೊಡ್ತಿಲ್ಲ ಅನ್ನೋ ರಾಜ್ಯ ಸರ್ಕಾರ ಆರೋಪ ವಿಚಾರವಾಗಿ ಪಿಸಿ ಮೋಹನ್ ಪ್ರತಿಕ್ರಿಯಿಸಿದ್ದು,ಖಂಡಿತವಾಗಿ ಕೂಡ ಕರ್ನಾಟಕದ ನೆಲ, ಜಲ ಭಾಷೆ ಬಂದಾಗ ಎಲ್ಲರೂ ಒಟ್ಟಾಗಿ ಹೋಗ್ತೀವಿ.ಈಗಾಗಲೇ ಪ್ರಹ್ಲಾದ್ ಜೋಶಿ ಅವರನ್ನ ಭೇಟಿಯಾಗಿ ಚರ್ಚೆ ಮಾಡಿದ್ದೇವೆ.ಅವರ ಮೂಲಕ ಕೇಂದ್ರಕ್ಕೆ ಮಾಹಿತಿ ತಲುಪಿಸಿದ್ದೇವೆ.ಕೇಂದ್ರ ಸರ್ಕಾರದ ವಿರುದ್ಧ ಐಫೋನ್‌ಗಳ ಹ್ಯಾಕ್ ವಿಚಾರಕ್ಕೆ ಕೇಂದ್ರ ಮಂತ್ರಿ ಅಶ್ವಿನಿ ವೈಷ್ಣವ್ ಈಗಾಗಲೇ ಮಾಹಿತಿ ನೀಡಿದ್ದಾರೆ.ನಮ್ಮ ದೇಶ ಮಾತ್ರವಲ್ಲದೆ 150 ದೇಶಗಳಿಗೆ ಈ ರೀತಿ ಕಳಿಸಿದ್ದಾರೆ.ಪ್ರಕೃತಿ ವಿಕೋಪ್ ಅಲರ್ಟ್ ಕಳಿಸಲಾಗಿದೆ.ಇದು ಮಾಕ್ ಡ್ರಿಲ್ ಅಂತ ಐ ಫೋನ್ ಹೇಳಿದೆ‌.ಇದನ್ನ ರಾಜಕೀಯ ದಾಳವಾಗಿ ವಿಪಕ್ಷಗಳು ಬಳಕೆ ಮಾಡಿಕೊಂಡಿವೆ ಎಂದು ಸಂಸದ ಪಿ.ಸಿ ಮೋಹನ್ ಸ್ಪಷ್ಟನೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ