ಸಿಎಂ ಆಡಿಯೋ ಟೇಪ್ ಅನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಆ ಮೂಲಕ ಜನರಿಗೆ ಸತ್ಯ ಗೊತ್ತಾಗಬೇಕಿದೆ. ಹೀಗಂತ ಮಾಜಿ ಸಚಿವ ಹೇಳಿದ್ದಾರೆ.
ಮಾಜಿ ಸಚಿವ ಯು. ಟಿ. ಖಾದರ್ ಹೇಳಿಕೆ ನೀಡಿದ್ದು, ಸಿಎಂ ಬಿ.ಎಸ್. ಯಡಿಯೂರಪ್ಪರ ಆಡಿಯೋ ಬಹಿರಂಗವಾಗಿದೆ. ಇವತ್ತು ಬಹಿರಂಗವಾಗಿ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಅಮಿತ್ ಶಾ ಅವರ ಅಣತಿಯಂತೆ ಆಪರೇಷನ್ ಕಮಲ ನಡೆದಿದೆ ಎಂದಿದ್ದಾರೆ.
ಈ ಕೂಡಲೇ ಕೇಂದ್ರ ಗೃಹ ಸಚಿವರು ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ಕೊಡಬೇಕು. ಆಡಿಯೋ ಟೇಪ್ ಅನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯ ಮಾಡಿದ್ರು.
ಕಾಂಗ್ರೆಸ್ ಪಕ್ಷ ಆಡಿಯೋ ವಿಷಯದ ವಿರುದ್ಧ ಹೋರಾಟ ಮಾಡಲಿದೆ. ಆಡಳಿತ ವ್ಯವಸ್ಥೆ ಕುಸಿದಿರೋದ್ರಿಂದ ಟಿಪ್ಪುವಿನ ವಿಚಾರ ಬಂದಿದೆ. ಟಿಪ್ಪು ವಿಚಾರ ಕೈಬಿಡುವುದರಿಂದ ಯುವಜನರಿಗೆ ನಷ್ಟವಾಗಲಿದೆ ಎಂದ್ರು.