ಪಿಎಸ್‌ ಐ ನೇಮಕಾತಿಯಲ್ಲಿ ಅಕ್ರಮ ಸಿಬಿಐಗೆ ವಹಿಸಿ: ಪ್ರಿಯಾಂಕ್‌ ಖರ್ಗೆ

ಭಾನುವಾರ, 17 ಏಪ್ರಿಲ್ 2022 (16:59 IST)

ಇತ್ತೀಚೆಗೆ ನಡೆದ ಪಿಎಸ್ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಸರ್ಕಾರ ಒಪ್ಪಿಕೊಂಡು ತನಿಖೆ ನಡೆಸುತ್ತಿದೆ. ಪ್ರಕರಣವನ್ನು ಆಳವಾಗಿ ನೋಡಿದಾಗ ಅಕ್ರಮದಲ್ಲಿ ಈ ಶೇ. 40 ಸರ್ಕಾರ ಭಾಗಿಯಾಗಿರುವುದು ಸ್ಪಷ್ಟವಾಗುತ್ತದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಲಕ್ಷಾಂತರ ಯುವಕರ ಬದುಕು ಹಾಳು ಮಾಡುತ್ತಿದ್ದಾರೆ. ನಮ್ಮಲ್ಲಿ ಸರ್ಕಾರಿ ನೌಕರಿ ಎಂದರೆ ಒಂದು ರೀತಿ ಕನಸಾಗಿದೆ. ತಮ್ಮ ಮಕ್ಕಳಿಗೆ ಓದಿಸಿ, ಸರ್ಕಾರಿ ಕೆಲಸ ಸಿಗಬೇಕು ಎಂದು ಪೋಷಕರು ಹಗಳಿರುಲಳು ಶ್ರಮಿಸುತ್ತಾರೆ. ಅಭ್ಯರ್ಥಿಗಳು ಕೂಡ ಅಪಾರ ಶ್ರಮ ಹಾಕುತ್ತಾರೆ. ನಮ್ಮ ಊರಿನ ಕಡೆ ಒಬ್ಬ ವಿದ್ಯಾರ್ಥಿ ಸರ್ಕಾರಿ ಹುದ್ದೆ ಪಡೆಯಲು ಪ್ರಯತ್ನಿಸಿದರೆ, ಇಡೀ ಊರೇ ಆತನ ಮೇಲೆ ನಿರೀಕ್ಷೆ ಇಟ್ಟುಕೊಳ್ಳುತ್ತದೆ. ಸರ್ಕಾರ ಯುವಕರ ಕನಸು ನುಚ್ಚು ನೂರು ಮಾಡುತ್ತಿದೆ  ಎಂದು ಆರೋಪಿಸಿದರು.

2020ರಲ್ಲಿ ಸರ್ಕಾರಿ ಹುದ್ದೆ ಭರ್ತಿ ಮಾಡುವಂತೆ ಹೈಕೋರ್ಟ್ ಆದೇಶ ನೀಡುತ್ತದೆ. ಅದರಂತೆ ಸರ್ಕಾರ ಪಿಎಸ್ ಹುದ್ದೆ ನೇಮಕಕ್ಕೆ 2 ಅಧಿಸೂಚನೆ ಹೊರಡಿಸುತ್ತದೆಮೊದಲ ಹಂತದಲ್ಲಿ 545 ಹುದ್ದೆಗಳಿಗೆ, ಎರಡನೇ ಹಂತದಲ್ಲಿ 402 ಒಟ್ಟು 947 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸುತ್ತದೆ. ಏಪ್ರಿಲ್ 1, 2020ರಲ್ಲಿ ಈ ಶೇ. 40 ಸರ್ಕಾರ ಅರ್ಜಿ ಕರೆಯುತ್ತಾರೆ, ಮೇ 14, 2020ಗೆ ನೋಟಿಫಿಕೇಶನ್ ಪ್ರಕಟವಾಗುತ್ತದೆ. ಇದರಲ್ಲಿ ಕ್ರೀಡಾಪಟುಗಳಿಗೆ ವಿಶೇಷ ಕೋಟಾ ನೀಡಲು ಇದನ್ನು ತಡೆ ಹಿಡಿಯುತ್ತಾರೆ. ಇದು ಒಳ್ಳೆಯದು. ನಂತರ .21, 2021ರಲ್ಲಿ ಎರಡನೇ ಅಧಿಸೂಚನೆ ಹೊರಡಿಸಿ, .22ರಿಂದ ಅರ್ಜಿ ಆಹ್ವಾನ ಆರಂಭ. ಆಶ್ಚರ್ಯ ಎಂದರೆ 545 ಹುದ್ದೆಗೆ 1,28,598 ಅರ್ಜಿ ಬರುತ್ತವೆ. ಇದು ನಮ್ಮಲ್ಲಿ ಎಷ್ಟು ಜನ ಆಕಾಂಕ್ಷಿ ಇದ್ದಾರೆ ಎಂದು ಗೊತ್ತಾಗುತ್ತದೆ ಎಂದು ಹೇಳಿದ್ಧಾರೆ.

ಆಕ್ಟೊಬರ್ 3, 2021ರಂದು ಲಿಖಿತ ಪರೀಕ್ಷೆ. ಆಗ ಅಭ್ಯರ್ಥಿಗಳು ಚರ್ಚೆ ನಡೆಯುವಾಗ ಇದರಲ್ಲಿ ಅಕ್ರಮ ನಡೆದಿರುವ ಅನುಮಾನ ವ್ಯಕ್ತವಾಗುತ್ತದೆ.1 ವಿಚಾರವಾಗಿ ದೂರು ನೀಡುತ್ತಾರೆ. ಅದೇ ದಿನ 402 ಹುದ್ದೆಗಳಿಗೆ ಎರಡನೇ ಹಂತದ ನೇಮಕಾತಿಗೆ ಪರೀಕ್ಷೆ ಪ್ರಕಟ. ಆಗ ಮೊದಲ ಹಂತದ ನೇಮಕಾತಿ ಪರೀಕ್ಷೆಯಲ್ಲಿ ಸಾಕಷ್ಟು ಅಕ್ರಮ ನಡೆದಿರುವ ಮಾಹಿತಿ ಇದೆ, ಹೀಗಾಗಿ ಎರಡನೇ ಹಂತದ ನೇಮಕಾತಿಯಲ್ಲಿ ಪಾರದರ್ಶಕತೆ ಕಾಪಾಡಿ ಎಂದು ಅಭ್ಯರ್ಥಿಗಳು ಮನವಿ ಮಾಡುತ್ತಾರೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ