ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದ ಮೇಲೆ ಸಿಸಿಬಿ ದಾಳಿ

ಬುಧವಾರ, 1 ಡಿಸೆಂಬರ್ 2021 (19:56 IST)
ಬೆಂಗಳೂರು: ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದ  ಬೆಳ್ಳಂ ಬೆಳಗ್ಗೆ ಸಿಸಿಬಿ ದಾಳಿ ನಡೆಸಿದೆ.
ಜೈಲಿನಿಂದಲೇ ಅನೇಕ ಅಪರಾಧ ಪ್ರಕರಣಗಳು ನಡೆಯುತ್ತಿರುವ ಕಾರಣದಿಂದ, ದಾಳಿ ನಡೆಸಲಾಗಿದೆ. ಈ ವೇಳೆ ಗಾಂಜಾ ಪೊಟ್ಟಣಗಳು ಹಾಗೂ ಗಾಂಜಾ ಪೈಪುಗಳು ವಶಪಡಿಸಿಕೊಳ್ಳಲಾಗಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲೇ ಕುಳಿತು ವ್ಯವಹಾರ ಮಾಡುತ್ತಿರುವ ಪಾತಕಿಗಳಿಗೆ ದಾಳಿ ತಕ್ಷಣದ ಎಚ್ಚರಿಕೆಯನ್ನಷ್ಟೇ ರವಾನಿಸಲಿದೆ. ಸಾಮಾನ್ಯವಾಗಿ ಪ್ರತಿ ದಾಳಿಯಲ್ಲಿ ಮೊಬೈಲ್, ಗಾಂಜಾ ಹಾಗೂ ಇತರ ವಸ್ತುಗಳು ಪತ್ತೆಯಾಗುತ್ತಿದ್ದವು. ಈಗಿನ ಸಿಸಿಬಿ ಪೊಲೀಸರ ಕಾರ್ಯಾಚರಣೆಯಲ್ಲಿ ಜೈಲಿನ ಅಧಿಕಾರಿಗಳಿಗೂ ಸಾಕಷ್ಟು ಮುಜುಗರ ಉಂಟಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ